ಚಿನ್ನದಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕದ್ದ ಮಹಿಳೆಯರು

gold
Published on

ಮೈಸೂರು : ನಗರದ ಬಿ.ಎನ್.ರಸ್ತೆಯ ಚಿನ್ನಾಭರಣ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಖರೀದಿಗೆ ಬಂದ ಮಹಿಳೆಯರು, 80 ಸಾವಿರ ರೂ. ವೌಲ್ಯದ ಚಿನ್ನಾಭರಣ ಕದ್ದಿದ್ದಾರೆ.

ರಾತ್ರಿ 8 ಗಂಟೆ ಸಮಯದಲ್ಲಿ ಬಂದ ಇಬ್ಬರು ಮಹಿಳೆಯರು ಬಳಿಕ ಯಾವುದೇ ಆಭರಣ ಖರೀದಿ ಮಾಡದೇ ಹಿಂದಿರುಗಿದ್ದಾರೆ.

ರಾತ್ರಿ 9 ಗಂಟೆಯಲ್ಲಿ ಸ್ಟಾಕ್ ಪರಿಶೀಲನೆ ಮಾಡುವ ವೇಳೆ ಕಳ್ಳತನವಾಗಿರುವುದು ಪತ್ತೆಯಾಗಿದೆ. ಈ ಸಂಬಂಧ ಮಳಿಗೆಯ ವ್ಯವಸ್ಥಾಪಕ ಎಂ.ವಿನೋದ್‌ಕುಮಾರ್ ದೂರು ನೀಡಿದ್ದಾರೆ. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net