

ಗೊಳಸಂಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದ ಗೃಹಲಕ್ಷ್ಮೀ ಯೋಜನೆಯ ಲಾನುಭವಿ ಮಹಿಳೆಯರು ವಾರದಿಂದ ಹಣ ಜಮೆ ಕುರಿತು ಖಾತೆ ಪರಿಶೀಲನೆ ಮತ್ತು ಡ್ರಾ ಮಾಡಿಕೊಳ್ಳಲು ಸ್ಥಳೀಯ ಕೆನರಾ ಬ್ಯಾಂಕ್‌ಗೆ ಮುಗಿ ಬಿದ್ದಿದ್ದಾರೆ.
ಗೊಳಸಂಗಿಯೂ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗರಿಗೆ ಕೆನರಾ ಬ್ಯಾಂಕ್ ವಹಿವಾಟಿಗೆ ಸೇತುವೆಯಾಗಿದೆ. ಏತನ್ಮಧ್ಯೆ ಕಳೆದ ಸೋಮವಾರ ಗೃಹಲಕ್ಷ್ಮೀ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂಬ ಸುದ್ದಿ ತಿಳಿದು ಜನತೆ ಬ್ಯಾಂಕ್ ಮುಂದೆ ದೊಡ್ಡನೆಯ ಸರದಿಯಲ್ಲಿ ನಿಂತಿದ್ದರು. ಹಣ ಜಮೆಯಾದವರು ಹುಮ್ಮಸ್ಸಿನಿಂದ ಹೊರ ಬಂದರೆ, ಬಾರದಿದ್ದವರು ಸಪ್ಪೆ ಮುಖ ಹೊತ್ತು ಮನೆಗೆ ಮರಳಿದರು.
ಕಳೆದ ಸೋಮವಾರ ಗೃಹಲಕ್ಷ್ಮೀ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದು, ಲಾನುಭವಿ ಹೆಣ್ಣು ಮಕ್ಕಳು ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿಕೊಳ್ಳಬೇಕು. ಗೊಳಸಂಗಿ ವ್ಯಾಪ್ತಿಯಲ್ಲಿ ಜಮೆ ಆಗದೇ ಇದ್ದವರು ಮೊ.: 9606348836ಗೆ ಸಂಪರ್ಕಿಸಿ.
-ಸಂತೋಷ ಗಣಾಚಾರಿ, ಅಧ್ಯಕ್ಷ, ಪಂಚ ಗ್ಯಾರಂಟಿ ಯೋಜನಾ ಸಮಿತಿ.