ದೇಶದ ಪ್ರಗತಿ ಹೆಚ್ಚಿಸುತ್ತಿರುವ ಮಹಿಳೆಯರು

ಮಳವಳ್ಳಿಯ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಎಂ.ಮಹೇಂದ್ರ ಉದ್ಘಾಟಿಸಿದರು. ನ್ಯಾಯಾಧೀಶೆ ಎಚ್.ಎಸ್.ಕಾವ್ಯಶ್ರೀ, ಸಚಿನ್ ಕುಮಾರ್ ಶಿವಪೂಜಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಕಾರ್ಯದರ್ಶಿ ನಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಶಂಕರಸ್ವಾಮಿ, ಎಂ.ಎಸ್.ಶ್ರೀಕಂಠಸ್ವಾಮಿ ಇದ್ದರು.
ಮಳವಳ್ಳಿಯ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಎಂ.ಮಹೇಂದ್ರ ಉದ್ಘಾಟಿಸಿದರು. ನ್ಯಾಯಾಧೀಶೆ ಎಚ್.ಎಸ್.ಕಾವ್ಯಶ್ರೀ, ಸಚಿನ್ ಕುಮಾರ್ ಶಿವಪೂಜಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಕಾರ್ಯದರ್ಶಿ ನಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಶಂಕರಸ್ವಾಮಿ, ಎಂ.ಎಸ್.ಶ್ರೀಕಂಠಸ್ವಾಮಿ ಇದ್ದರು.
Published on

ಮಳವಳ್ಳಿ: ಪರುಷರ ಸರಿಸಮನಾಗಿ ಉದ್ಯಮ ಸೇರಿದಂತೆ ಸಮಾಜದ ಬಹಳಷ್ಟು ಕ್ಷೇತ್ರದಲ್ಲಿ ಮಹಿಳೆಯರು ಸೇವೆ ಸಲ್ಲಿಸುವುದರ ಜತೆಗೆ ಸಾಧಕಿಯರಾಗಿ ದೇಶದ ಪ್ರಗತಿಯನ್ನು ಹೆಚ್ಚಿಸುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಶ್ಲಾಘಿಸಿದರು.

ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಲಾಲನೆ, ಪಾಲನೆಗಷ್ಟೇ ಸೀಮಿತವಾಗಿದ್ದಂತಹ ಒಂದು ಕಾಲಘಟ್ಟವಿತ್ತು. ಆದರೆ, ಇಂದು ಎಲ್ಲ ರಂಗದಲ್ಲೂ ಮುಖ್ಯ ವಾಹಿನಿಗೆ ಬಂದು ತಮ್ಮ ಛಾಪು ಮೂಡಿಸುತ್ತಿದ್ದಾರೆ. ಪುರುಷರು ದುಡಿದು ಕುಟುಂಬ ಹಾಗು-ಹೋಗುಗಳನ್ನು ನೋಡುತ್ತಾರೆ. ಆದರೆ ಹೆಣ್ಣು ಸಂಸಾರದ ಹೊಣೆಗಾರಿಕೆ ನಿರ್ವಹಣೆಯ ಜತೆಗೆ ದುಡಿಮೆಯಲ್ಲೂ ಸಮಾನತೆ ಕಾಯ್ದುಕೊಳ್ಳುತ್ತಿದ್ದು ಎಲ್ಲರೂ ಗೌರವ ಭಾವನೆಯಿಂದ ಕಾಣಬೇಕೆಂದರು.

ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ಎಸ್.ಕಾವ್ಯಶ್ರೀ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಉತ್ತಮ ಸ್ಥಾನಮಾನ ಪಡೆದಿದ್ದು, ಪುರುಷ ಸಾಧಕನ ಹಿಂದೆ ಮಹಿಳೆ ಇರುತ್ತಾಳೆ. ಅಲ್ಲದೆ ಹೊರಗಡೆ ಕೆಲಸ ನಿರ್ವಹಿಸುವುದರ ಜತೆಗೆ ದೈನಂದಿನ ಚಟುವಟಿಕೆಗಳಲ್ಲಿಯೂ ಗೃಹಿಣಿ ಪಾತ್ರ ಪ್ರಮುಖವಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್‌ಕುಮಾರ್ ಶಿವಪೂಜಿ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ ಸುಂದರ್ ಮಾತನಾಡಿದರು. ಸಂಘದ ಕಾರ್ಯದರ್ಶಿ ನಟೇಶ್, ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಶಂಕರಸ್ವಾಮಿ, ಎಂ.ಎಸ್.ಶ್ರೀಕಂಠಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net