ಗಂಡನ ಜತೆ ಜಗಳವಾಡಿ ಕೆರೆ ಮಧ್ಯೆ ಸಾಯ್ತೀನಿ ಅಂತ ಕುಳಿತ ಮಹಿಳೆ! ಮುಂದೇನಾಯ್ತು?

Lakewomen
Published on

ಬೆಂಗಳೂರು: ಗಂಡನ ಜತೆ ಜಗಳವಾಡಿ ಸಾಮಾನ್ಯವಾಗಿ ಮಹಿಳೆಯರು ತವರು ಮನೆಗೆ ಹೋಗುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಈ ಮಹಿಳೆ ಮಾಡಿರುವುದೇ ಬೇರೆ.ಗಂಡನ ಜತೆ ಜಗಳವಾಡಿ ಸೀದಾ ಹೋಗಿದ್ದು ಕೆರೆಗೆ.

ಈ ಮಹಿಳೆಯು ಗಂಡನ ಜತೆ ಜಗಳವಾಡಿ ಸಾಯುತ್ತೇನೆ ಎಂದು ಕೆರೆಯ ಮಧ್ಯಭಾಗದಲ್ಲಿ ಕುಳಿತಿದ್ದು, ಕೆಲಕಾಲ ಆತಂಕ ಸೃಷ್ಟಿಯಾಯಿತು.

ಕೋರಮಂಗಲದ 3ನೇ ಬ್ಲಾಕ್​ನಲ್ಲಿರುವ ಕೆರೆಯಲ್ಲಿ ಈ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಳಿತಿದ್ದಳು,ಭಾನುವಾರ ಬೆಳಗ್ಗೆ ವಾಕಿಂಗ್​ ಹೋಗುವ ವೇಳೆ ಗಂಡನ ಜತೆ ಜಗಳವಾಡಿದ್ದಾರೆ. ನಂತರ ಮಾಡಿಕೊಂಡು ಮಹಿಳೆ ಸಾಯುತ್ತೇನೆ ಎಂದು ಇಲ್ಲೇ ಇದ್ದ ಕೆರೆಯಲ್ಲಿ ಕುಳಿತುಕೊಂಡಿದ್ದಾರೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಲ್ಲಿದ್ದವರು ಕೂಡ ಮಹಿಳೆಯ ಮನವೊಲಿಕೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮನವೊಲಿಸಲು ಹರಸಾಹಸವೇ ಪಡಬೇಕಾಯಿತು. ಯಾರಾದರೂ ಹತ್ತಿರ ಬಂದರೆ ಮುಳುಗಿ ಸಾಯುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾಳೆ. ಕೊನೆಗೆ ಪೊಲೀಸರೇ ಮನವೊಲಿಸಿ ಆಕೆಯನ್ನು ಕೆರೆಯಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net