ಮಹಿಳೆಯರು ಸಂಘಟಿತರಾಗಬೇಕು : ಶಶಿಕಾಂತ್ ರೈ

MDK02
Published on

ಮಡಿಕೇರಿ: ರಾಮ ರಾಜ್ಯದ ಕನಸು ನನಸಾಗಬೇಕಾದರೆ ಮಹಿಳೆಯರು ಮತ್ತಷ್ಟು ಸಂಘಟಿತರಾಗಬೇಕೆಂದು ಕಂಬಿಬಾಣೆ ರಾಮ ಮಂದಿರ ಹಾಗೂ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷ ಶಶಿಕಾಂತ್ ರೈ ಕರೆ ನೀಡಿದರು.


ಕಂಬಿಬಾಣೆಯ ಕಮಲ ನೆಹರು ಯುವತಿ ಸಂಘದಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ತೊಟ್ಟಿಲು ತೂಗುವ ಕೈಗಳು ಇಂದು ಜಗತ್ತನ್ನು ಆಳುತ್ತಿದೆ. ನಾಲ್ಕು ಗೋಡೆಯ ಮಧ್ಯೆ ಇರುವ ಮಹಿಳೆಯರು ಇಂದು ಹಲವು ಕ್ಷೇತ್ರದಲ್ಲಿ ಮಹಿಳೆಯರು ಸಾಧಿಸುತ್ತಿದ್ದಾರೆ ಎಂದ ಅವರು, ಪ್ರಥಮ ವರ್ಷದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರ ಪರಿಶ್ರಮ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಯುವತಿ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.


ಕಾಫಿ ಬೆಳೆಗಾರರಾದ ಸಾಯಿ ಕುಮಾರ್ ಮಾತನಾಡಿ, ಯುವತಿ ಸಂಘದಿಂದ ಆರು ತಿಂಗಳಿಗೊಮ್ಮೆ ಉತ್ತಮ ಕಾರ್ಯಕ್ರಮ ಮಾಡಿದರೆ ನಾನು ಹತ್ತು ಸಾವಿರ ನೀಡುತ್ತೇನೆ ಎಂದು ಭರವಸೆ ನೀಡಿದರು.


ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಗಣೇಶ್, ದಿನೇಶ್, ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕಗಳಿಸಿದ ಅಫ್ರಿನಾ, ಮಹಮ್ಮದ್ ಸಿನಾನ ಅವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಯಿಸಲಾಯಿತು.


ಅಂಗನವಾಡಿ ಕಾರ್ಯಕರ್ತೆಯರಾದ ನಳಿನಿ ಶಂಭು, ಲಕ್ಷ್ಮಿ ರವಿ, ಕುಸುಮ, ಐಸಮ್ಮ ಮತ್ತಿತರರಿಗೆ ಗೌರವ ಸಲ್ಲಿಸಲಾಯಿತು. ಕಮಲ ನೆಹರು ಯುವತಿ ಸಂಘದ ಹಿರಿಯರಾದ ಮುತ್ತಮ್ಮ ಶಾಂತಮ್ಮ, ಹಾಲಮ್ಮ ಜನಾರ್ಧನ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.


ಕಾರ್ಯಕ್ರಮದಲ್ಲಿ ಕಂಬಿಬಾಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಧುನಾಗಪ್ಪ, ಸುಭಾಷ್ ಯುವಕ ಸಂಘದ ಗೌರವಾಧ್ಯಕ್ಷ ಲವಾಶಾಂತಪ್ಪ, ಕಂಬಿಬಾಣೆ ಗ್ರಾಪಂ ಪಿಡಿಒ ಮಧುಮತಿ, ಮಾಜಿ ಯೋಧ ಕರ್ನಲ್ ಉತ್ತಯ್ಯ, ಕಂಬಿಬಾಣೆ ಅಸ್ಸಾರುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷ ಮೊಹಿದಿನ್, ಸುಭಾಷ್ ಯೂತ್ ಕ್ಲಬ್ ಅಧ್ಯಕ್ಷರು ಗಣೇಶ್, ಕಮಲ ನೆಹರು ಯುವತಿ ಸಂಘದ ಅಧ್ಯಕ್ಷೆ ವೀಣಾ ರಾಮಚಂದ್ರ, ಗೌರವಾಧ್ಯಕ್ಷೆ ಉಷಾ ಮುರುಳಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net