ಮಹಿಳೆಯರು ಆರ್ಥಿಕ ಸಬಲತೆಗೆ ಒತ್ತು ನೀಡಲಿ

anekal
Published on

ಆನೇಕಲ್​: ವಿಶ್ವದಾದ್ಯಂತ ಅನೇಕ ರಂಗಗಳಲ್ಲಿ ಯಶಸ್ವಿಯಾಗಿ ಛಾಪು ಮೂಡಿಸುತ್ತಿರುವ ಮಹಿಳೆಯರು ಹೆಚ್ಚು ಅವಕಾಶಗಳೊಂದಿಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದು ಪದ್ಮಶ್ರೀ ಡಾ.ಭಾರತಿ ವಿಷ್ಣುವರ್ಧನ್​ ಕರೆ ನೀಡಿದರು.

ಆನೇಕಲ್​ ಸಮೀಪದ ಅಲೈಯನ್ಸ್​ ವಿವಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿವಿಧ ೇತ್ರಗಳ ಸಾಧಕ ಮಹಿಳೆಯರಿಗೆ "ಮಹಿಳಾ ಸ್ಪಂದನ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ವಿವಿಧ ಹಂತಗಳಲ್ಲಿ ಹೆಣ್ಣು ಪರಿಪೂರ್ಣತೆಯಿಂದ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ತ್ಯಾಗಮಯಿಯಾದ ಆಕೆ ತನ್ನ ಕುಟುಂಬ, ದೇಶಕ್ಕಾಗಿ ಕೊಡುಗೆಯನ್ನೂ ನೀಡಿ, ಇತರರ ಗೆಲುವನ್ನು ತನ್ನದೆಂದು ಪರಿಭಾವಿಸಿ ತೃಪ್ತಿ ಪಡುತ್ತಾಳೆ. ಮಹಿಳೆಯರು ಇದ್ದೆಡೆ ಗೌರವ ಶಕ್ತಿ ಇದ್ದು ಪ್ರಭಾವಿತಳಾಗಿ ಕಾಣುತ್ತಾಳೆ ಎಂದರು.

ಸಂಸದ ಡಾ.ಸಿ.ಎನ್​.ಮಂಜುನಾಥ್​ ಮಾತನಾಡಿ, ಒತ್ತಡದ ಬದುಕು ದೇಹ ಮತ್ತು ಮಾನಸಿಕವಾಗಿ ಪರಿಣಾಮ ಬೀರಲಿದ್ದು, ನಮ್ಮನ್ನು ನಾವು ಸ್ವಯಂ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಂದು ಉಪಾಯವಾದರೆ ಸನ್ನಿವೇಶ, ಪರಿಸ್ಥಿತಿಗೆ ಅನುಗುಣವಾಗಿ ಮನ@ಸ್ಥಿತಿಯನ್ನು ಬದಲಿಸಿಕೊಳ್ಳುವುದು ಬುದ್ಧಿವಂತಿಕೆಯ ಹಾದಿ. ಸಮುದ್ರದಲ್ಲಿನ ಮಾಣಿಕ್ಯದಂತೆ ವಿಶ್ವದಲ್ಲಿ ಯಶಸ್ವಿ ಮಹಿಳೆಯರ ಸಂಖ್ಯೆ ಬಹಳಷ್ಟಿದೆ. ಮನುಕುಲಕ್ಕೆ ನಿಮ್ಮ ಕೊಡುಗೆ ಮೇರು ಪರ್ವತದಷ್ಟಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂ ಯೋಜನೆಯಂತೆ ಮುಂಬರುವ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ೂಷಣೆಯಾಗಲಿದ್ದು, ದೇಶದ ಆಡಳಿತ ಚುಕ್ಕಾಣಿಯಲ್ಲೂ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.

ಅಲೈಯನ್ಸ್​ ವಿವಿಯ ಪ್ರೊ.ಚಾನ್ಸೆಲಾರ್​ ಅಭಯ್​ ಚೆಬ್ಬಿ ಮಾತನಾಡಿದರು. ಡಾ.ಮತಂ ವಿಶ್ವನಾಥಯ್ಯ, ರಿಜಿಸ್ಟಾರ್​ ಡಾ.ಸುರೇಖಾಶೆಟ್ಟಿ ಇದ್ದರು.

ಹೊಲಿಗೆ ಯಂತ್ರ ವಿತರಣೆ

ಸಿನಿ ಕ್ಷೇತ್ರದಿಂದ ಹಿರಿಯ ನಟಿ ಡಾ.ಭಾರತಿ ವಿಷ್ಣುವರ್ಧನ್​, ಸುಧಾ ಬೆಳವಾಡಿ, ಕೃಷಿ ೇತ್ರದಲ್ಲಿ ಕವಿತಾ ಮಿಶ್ರಾ, ಮಾಧ್ಯಮ ೇತ್ರದಲ್ಲಿ ನಮಿತಾ ಜೈನ್​, ಪೂಜಾ ಪ್ರಸನ್ನ ಸೇರಿದಂತೆ ವೈದ್ಯ, ಕಾನೂನು, ಉದ್ಯಮ ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ "ಅಲಯನ್ಸ್​ ಸ್ಪಂದನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಲೈಯನ್ಸ್​ ವಿವಿಯ ಸಿಎಸ್​ಆರ್​ ನಿಧಿಯಿಂದ ಹಕ್ಕಿಪಿಕ್ಕಿ ಕಾಲನಿಯ 25 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net