ಸಮಾಜದ ಅಲಿಖಿತ ಚೌಕಟ್ಟಿನಿಂದ ಹೆಣ್ಣು ಹೊರಬೇಕು

12-10-Shiva-3
ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನ ವಿವಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ವಿವಿ ಆಡಳಿತಾಕಾರಿ ಡಾ.ಜಾಗೃತಿ ದೇಶಮಾನೆಯನ್ನು ಗುರುವಾರ ಸನ್ಮಾನಿಸಲಾಯಿತು. ಪ್ರಾಧ್ಯಾಪಕಿ ಡಾ.ವಿಜಯಾ ವಾಲಿ, ಗ್ರಾ.ಪಂ. ಅಧ್ಯಕ್ಷೆ ಮಹಾದೇವಮ್ಮ, ಸದಸ್ಯೆ ನಾರಾಯಣಮ್ಮ ಇದ್ದರು.
Published on

ರಾಯಚೂರು: ಸಮಾಜದ ಅಲಿಖಿತ ಚೌಕಟ್ಟಿನಿಂದ ಹೊರಬರುವ ಮೂಲಕ ಹೆಣ್ಣು ಮಹಾನ್ ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ಇಂದಿರಾಗಾಂ, ಕಲ್ಪನಾ ಚಾವ್ಲಾ, ಪಿ.ಟಿ.ಉಷಾರಂತಹ ಸಾಧಕಿಯರು ಸಾಕ್ಷಿಯಾಗಿದ್ದಾರೆ ಎಂದು ಕೃಷಿ ವಿಜ್ಞಾನಗಳ ವಿವಿಯ ಆಡಳಿತಾಕಾರಿ ಡಾ.ಜಾಗೃತಿ ದೇಶಮಾನೆ ಹೇಳಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ಮಸೀದಿಪುರ ಗ್ರಾಮದಲ್ಲಿ ಕೃಷಿ ವಿಜ್ಞಾನ ವಿವಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರದ ನಿಮಿತ್ತ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಹೆಣ್ಣು, ಗಂಡು ಎಂಬ ಬೇಧಭಾವವಿಲ್ಲದೆ ಎಲ್ಲ ಕ್ಷೇತ್ರಗಳಲ್ಲಿಯೂ ಇಬ್ಬರು ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಣ್ಣು ಇಂದು ಕೇವಲ ಮನೆಗೆ ಸಿಮೀತವಾಗಿಲ್ಲ. ಹೆಣ್ಣು ಗೌರವದಿಂದ ಜೀವಿಸುವಂತಾಗಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ.
ಓದುವ ವಿದ್ಯಾರ್ಥಿನಿಯರಿಗೆ ಇರುವ ಸಮಸ್ಯೆಗಳನ್ನು ಆಲಿಸಿ ಓದು ಬಿಡಿಸುವ ಬದಲು ಅವುಗಳಿಗೆ ಪರಿಹಾರ ಸೂಚಿಸಿದರೆ ಹೆಣ್ಣು ಶಕ್ತಿವಂತಳಾಗಲು ಸಾಧ್ಯವಾಗಲಿದೆ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಳ್ಳಲು ಯುವತಿಯರು, ಮಹಿಳೆಯರು ಮುಂದಾಗಬೇಕು ಎಂದು ಡಾ.ಜಾಗೃತಿ ದೇಶಮಾನೆ ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಡಾ.ಜಾಗೃತಿ ದೇಶಮಾನೆಯನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿವಿ ಪ್ರಾಧ್ಯಾಪಕಿ ಡಾ.ವಿಜಯಾ ವಾಲಿ, ಮಲ್ದಕಲ್ ಗ್ರಾ.ಪಂ. ಅಧ್ಯಕ್ಷೆ ಮಹಾದೇವಮ್ಮ, ಸದಸ್ಯೆ ನಾರಾಯಣಮ್ಮ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net