

ಬಸವನಬಾಗೇವಾಡಿ: ಮಹಿಳೆಯರು ಸ್ವ ಉದ್ಯೋಗ ಕೈಗೊಂಡು ಸಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ನ್ಯಾಯವಾದಿ ರವಿ ರಾಠೋಡ ಹೇಳಿದರು.
ಪಟ್ಟಣದ ರಾಧಾಕೃಷ್ಣ ನಗರದಲ್ಲಿರುವ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಸ್ವಯಂ ಉದ್ಯೋಗ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಮಹಿಳೆಯರು ನಾಲ್ಕುಗೋಡೆಗಳ ಮಧ್ಯೆಯೇ ಸೀಮಿತರಾಗಿದ್ದರು. ಆದರೆ, ಇಂದು ಎಲ್ಲ ರಂಗದಲ್ಲೂ ಮಹಿಳೆಯರು ಸಾಧನೆ ಮಾಡಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಮಹಿಳೆಯರಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ತಾಲೂಕಿನ ಸಮನ್ವಯಾಧಿಕಾರಿ ಸಂಗೀತಾ ಮಡಿವಾಳ, ವಲಯ ಮೇಲ್ವಿಚಾರಕರು ಕೋಮಲ ಕುರುಬರ ಇತರರಿದ್ದರು.
ಬ್ಯೂಟಿ ಪಾರ್ಲರ್ ತರಬೇತುಗಾರತಿ ನೀಲಮ್ಮ ಅವರು 30 ಜನ ಮಹಿಳೆಯರಿಗೆ ತರಬೇತಿ ನೀಡಿದರು.