ವಚನ ಸಾಹಿತ್ಯದ ಉಳಿವಿನಲ್ಲಿ ವಚನಗಾರ್ತಿಯರ ಪಾತ್ರ ಪ್ರಮುಖ

12SND-02
Published on

ಸಿಂಧನೂರು: ವಚನ ಸಾಹಿತ್ಯದ ಉಳಿವಿನಲ್ಲಿ ವಚನಗಾರ್ತಿಯರ ಪಾತ್ರ ಪ್ರಮುಖವಾಗಿದ್ದು, ಸ್ತ್ರೀ ಸಮಾಜದ ಮೇಲೆ ಬಸವಣ್ಣ ಅವರ ಋಣ ಇದೆ ಎಂದು ಅನುಭಾವಿ ಸಾವಿತ್ರಿ ಬಾದರ್ಲಿ ಹೇಳಿದರು.

ನಗರದ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಸಂಸ್ಕಾರದ ಬದುಕಿಗಾಗಿ ವಚನ ಶ್ರವಣ ಕಾರ್ಯಕ್ರಮದಲ್ಲಿ ಬಸವ ಧರ್ಮದಲ್ಲಿ ಮಹಿಳಾ ಪ್ರಾಧಾನ್ಯತೆ ಕುರಿತು ಭಾನುವಾರ ಮಾತನಾಡಿದರು. 12ನೇ ಶತಮಾನದ ಶರಣರು ಮಹಿಳೆಯರ ಸ್ವಾತಂತ್ರಕ್ಕೆ ರಾಜಮಾರ್ಗ ಹಾಕಿಕೊಟ್ಟು ಆತ್ಮಸ್ಥೈರ್ಯ ತುಂಬಿದರು. ಮಹಿಳೆಯರು ದುರ್ಬಲರಲ್ಲ. ಅಕ್ಕನಾಗಮ್ಮ ಧೈರ್ಯ, ನೀಲಾಂಬಿಕೆಯ ಸೈರಣೆ ನಮಗೆ ಆದರ್ಶವಾಗಬೇಕು. ನಾವು ಅವರ ವಿಚಾರ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕೆಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಿದ್ದರಾಮಯ್ಯ ಸಾಹುಕಾರ ಮಾಡಸಿರವಾರ ವಹಿಸಿದ್ದರು. ಪ್ರಮುಖರಾದ ಮಹೇಶ, ತಿಮ್ಮನಗೌಡ ಚಿಲ್ಕರಾಗಿ, ಸುಮಂಗಲಾ ಚಿಂಚರಕಿ, ವಿದ್ಯಾಶ್ರೀ ಮಾಲಿ ಪಾಟೀಲ್, ಲತಾ ಚಂದ್ರಗೌಡ, ಶಶಿಕಲಾ ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net