

ಅಂಕಲಗಿ: ಮಹಿಳೆಯರಲ್ಲಿ ಆರ್ಥಿಕ ಬಲವರ್ಧನೆ ಮತ್ತು ಸ್ವಾವಲಂಬನೆ ಗಟ್ಟಿಗೊಳಿಸುವುದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮುಖ್ಯ ಧ್ಯೇಯ ಎಂದು ಧಗ್ರಾಯೋ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ್ ಹೇಳಿದರು. ಸಮೀಪದ ಸುಲಧಾಳದ ಜಡಿ ಸಿದ್ಧೇಶ್ವರ ಮಠದ ಆವರಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷಿ$್ಮ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂದ ಸದಸ್ಯರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿ ಮಹಿಳೆಯರಲ್ಲಿ ಸಾಂಘಿಕ ಶಕ್ತಿ ತುಂಬುವ ಜತೆಗೆ ಸ್ವಾವಲಂಬನೆ ಬದುಕಿಗೆ ಪ್ರೇರಣೆ ನೀಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದರು. ರುದ್ರಯ್ಯ ಸ್ವಾಮೀಜಿ, ಕರವೇ ಉಕ ಅಧ್ಯಕ್ಷ ಬಸವರಾಜ ಪಂಜಾನಟ್ಟಿ , ಗ್ರಾಪಂ ಅಧ್ಯಕ್ಷ ಮಹಾಂತೇಶ ಬಿಚಗತ್ತಿ, ಮಾರುತಿ ಗೋಡಲಕುಂದರಗಿ, ಸಂಗಪ್ಪ ಮೀಸಿನಾಯಿಕ, ಪ್ರೊ.ಇಂದಿರಾ ಪಾಟೀಲ, ಗೌಡಪ್ಪ ಹೊಳೆಯಾಚಿ, ಯೋಜನಾಧಿಕಾರಿ ರೋಹಿತ ಎಚ್.ಎಚ್., ವಲಯ ಮೇಲ್ವಿಚಾರಕಿ ರೇಣುಕಾ ಹಿರೇಮಠ, ಸಣ್ಣಪ್ಪ ಸನದಿ ಇತರರಿದ್ದರು.