

ಬೆಳಗಾವಿ: ಇಲ್ಲಿ ವಿದ್ಯಾಧಿರಾಜ ಸಭಾಂಗಣದಲ್ಲಿ ಉನ್ನತಿ ಟ್ರಸ್ಟ್ ವತಿಯಿಂದ ನ.5ರಂದು “ಶಕ್ತಿಸಂಚಯ” ಜಾಗೃತ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲ್ಕಾತಾಯಿ ಇನಾಂದಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲರ, ಸಾಹಿತ್ಯ, ಸಂಘನೆ, ಧಾರ್ಮಿಕ, ಉದ್ಯಮ, ಶಿಕ್ಷಣ, ಕೃಷಿ, ಕಾನೂನು ಹೀಗೆ ಸಮಾಜದ ಹನ್ನೊಂದು ಕ್ಷೇತ್ರಗಳಲ್ಲಿ ಸಾಧನೆ ತೋರಿದ ಮಹಿಳೆಯರ ಸಮಾಗವೇ ಈ ಶಕ್ತಿಸಂಚಯ ಉದ್ದೇಶವಾಗಿದೆ.
ಲೇಖಕಿ ಆಶಾ ರತನ, ಪುಣೆಯ ಮಹಿಳಾ ಸಮನ್ವಯ ಸಹಸಂಯೋಜಕಿ ಭಾಗ್ಯಶ್ರೀ ಸಾಠೆ ಇತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.