ಸಂಘ ಸಂಸ್ಥೆಯಲ್ಲಿ ಮಹಿಳೆ ಪಾತ್ರ ಹಿರಿದು

kls kasapa
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಸುಜಯಾ ಸದಾನಂದ ಉಪನ್ಯಾಸ ನೀಡಿದರು. ಮುಮ್ತಾಜ್ ಬೇಗಂ, ವೈ.ಪ್ರೇಮ್‌ಕುಮಾರ್, ಪಾಂಡುರಂಗ, ಡಾ. ಜಾನಕಿ ಸುಂದರೇಶ್, ಗೀತಾ ಮಕ್ಕಿಮನೆ, ಮಲ್ಲಿಕಾರ್ಜುನ, ಷರ್ೀ, ಅಜಿತಪ್ರಸಾದ್, ಸುಮನಾ ಜಯರಾಜ್ ಇತರರಿದ್ದರು.
Published on

ಕಳಸ: ಸಂಘ ಸಂಸ್ಥೆಯಲ್ಲಿ ಮಹಿಳೆಯ ಪಾತ್ರ ಜವಾಬ್ದಾರಿಯುತವಾಗಿರುತ್ತದೆ ಎಂದು ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯಾ ಸದಾನಂದ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಶ್ರಾವಣ ಸಂಜೆ, ಯೋಗ-ಧ್ಯಾನ ಮತ್ತು ಮಾತು-ಮಂಥನ ಕಾರ್ಯಕ್ರಮದಲ್ಲಿ ಸಂಘ-ಸಂಸ್ಥೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಮಾತನಾಡಿದರು.
ಸಂಘ, ಸಂಸ್ಥೆಯಲ್ಲಿ ಮಹಿಳೆಯರ ಪಾತ್ರ ಜವಾಬ್ದಾರಿಯುತವಾಗಿರುತ್ತದೆ. ಇಲ್ಲಿ ಪುರುಷರ ಸಮಾನವಾಗಿ ಕಾರ್ಯನಿರ್ವಹಿಸುವುದು ಕೆಲವೊಂದು ವಿಚಾರದಲ್ಲಿ ಮಹಿಳೆಯರಿಗೆ ಕಷ್ಟಸಾಧ್ಯ. ಆದರೆ ಈ ಎಲ್ಲ ಕಾರ್ಯಕ್ರಮದಲ್ಲಿಯೂ ಮಹಿಳೆಗೆ ಪುರುಷನ ಬೆಂಬಲ ಬೇಕಾಗುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವಾಗ ನಾವು ಆದಷ್ಟು ಸೂಕ್ಷ್ಮವಾಗಿ ಅರಿತುಕೊಳ್ಳಬೇಕಾಗುತ್ತದೆ. ಪ್ರತಿಯೊಂದು ವಿಷಯದಲ್ಲೂ ನಮ್ಮನ್ನು ಗಮನಿಸುತ್ತಿರುತ್ತಾರೆ. ಅದು ವಸ್ತ್ರಸಂಹಿತೆ ಆಗಿರಬಹುದು ಅಥವಾ ನಾವು ಮಾತನಾಡುವ ರೀತಿ ಆಗಿರಬಹುದು. ನಾವು ಆ ಜವಾಬ್ದಾರಿಯುತ ಸ್ಥಾನಕ್ಕೆ ಅಗೌರವ ಆಗದ ರೀತಿಯಲ್ಲಿ ನಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಶ್ರದ್ಧೆ ಹಾಗೂ ಬದ್ಧತೆಯಿಂದ ವ್ಯವಹರಿಸುತ್ತಾರೆ. ಸಾಕಷ್ಟು ತಪ್ಪುಗಳು ಆಗದ ರೀತಿಯಲ್ಲಿ ಅವುಗಳನ್ನು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಲ್ಲಿ ಮಹಿಳೆಯರ ಪಾತ್ರವೇ ಹೆಚ್ಚು ಎಂದು ತಿಳಿಸಿದರು.
ಮಹಿಳಾ ಘಟಕದ ಅಧ್ಯಕ್ಷೆ ಮುಮ್ತಾಜ್ ಬೇಗಂ, ಯೋಗ ಶಿಕ್ಷಕ ವೈ.ಪ್ರೇಮ್‌ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಚಾಲಕ ಪಾಂಡುರಂಗ, ಡಾ. ಜಾನಕಿ ಸುಂದರೇಶ್, ಲೇಖಕಿ ಗೀತಾ ಮಕ್ಕಿಮನೆ, ಮಲ್ಲಿಕಾರ್ಜುನ, ಷರ್ೀ, ಅಜಿತಪ್ರಸಾದ್, ಸುಮನಾ ಜಯರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net