

ನರಗುಂದ: ಪಾಲಕರು ಹೆಣ್ಣು ಮತ್ತು ಗಂಡು ಮಕ್ಕಳು ಎಂಬ ಭೇದ-ಭಾವ ಮಾಡದೆ ಇಬ್ಬರಿಗೂ ಸಮನಾದ ಸಂಸ್ಕಾರ ನೀಡಬೇಕು ಎಂದು ಈಶ್ವರಿ ವಿದ್ಯಾಲಯದ ಸಂಚಾಲಕಿ ಪ್ರಭಕ್ಕ ಹೇಳಿದರು.
ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ರಾಜು ಕಲಾಲ ಮಾತನಾಡಿ, ಸ್ತ್ರೀಯರು ಎಲ್ಲಾ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳ ಶಕ್ತಿ ಅಗಾಧವಾದದ್ದು. ಹೆಣ್ಣಿನ ತ್ಯಾಗ ಮತ್ತು ಪ್ರೀತಿಗೆ ಸರಿಸಮಾನವಾದದ್ದು ಬೇರೊಂದಿಲ್ಲ. ಹೆಣ್ಣು ಇಲ್ಲದೆ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹೆಣ್ಣು ಮಡದಿ, ಸಹೋದರಿ, ಅತ್ತೆ, ಸೊಸೆ, ಮಗಳಾಗಿ, ಶಿಕ್ಷಕಿಯಾಗಿ ಪ್ರತಿಯೊಬ್ಬರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದರು.
ಮುಖ್ಯಾಧ್ಯಾಪಕ ಪಿ.ವಿ. ಕೆಂಚನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಲಾ ಹುಂಡೇಕರಮಠ, ಶೈಲಾ ಜಗತ್ತಾಪ, ಎಸ್.ವಿ. ಬ್ಯಾಹಟ್ಟಿ ಅನಿಸಿಕೆ ಹಂಚಿಕೊಂಡರು. ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಎಫ್.ವಿ. ಶಿರುಂದಮಠ, ವೀಣಾ ವಾಳದ, ಛಾಯಾ ಕಲಾಲ, ಬಿ.ಎಸ್. ಕಬಾಡ್ರ, ಇತರರರು ಪಾಲ್ಗೊಂಡಿದ್ದರು. ಎಂ.ಎಚ್. ನದಾಫ ಹಾಗೂ ವೈ.ಆರ್. ತಳವಾರ ಕಾರ್ಯಕ್ರಮ ನಿರ್ವಹಿಸಿದರು.