ಹೃದಯದ ಆರೋಗ್ಯಕ್ಕಾಗಿ ವುಮೆನ್ ಆನ್ ವಾಕ್

hhhhhhhhhh
Published on



ಮಂಗಳೂರು : ನಗರದ ಕೆಎಂಸಿ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಭಾನುವಾರ ವುಮೆನ್ ಆನ್ ವಾಕ್
ಕಾರ್ಯಕ್ರಮ ನಡೆಯಿತು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಆರಂಭಗೊಂಡ ನಡಿಗೆ ಅತ್ತಾವರದ ಕಪ್ರಿಗುಡ್ಡದಲ್ಲಿರುವ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಮಾಪನಗೊಂಡಿತು.
ವಾಕಥಾನ್ ಕಾರ್ಯಕ್ರಮಕ್ಕೆ ಮಂಗಳೂರಿನ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಡಿ. ಕುಲಕರ್ಣಿ, ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್‌ನ ಡೀನ್ ಡಾ. ಆಶಿತಾ ಉಪ್ಪೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾದ ವೈದ್ಯಾಧಿಕಾರಿ ಡಾ. ಪ್ರಿಯಾಂಕ ಶೇಖರ್ ಗೌರವ ಅತಿಥಿಗಳಾಗಿದ್ದರು. ರಾಷ್ಟ್ರೀಯ ಮಟ್ಟದ ಅಥ್ಲೀಟ್ ವರ್ಷಾ ಅವರು ವಾಕಥಾನ್‌ನ ನೇತೃತ್ವ ವಹಿಸಿದ್ದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನರಸಿಂಹ ಪೈ ವಿಶ್ವ ಹೃದಯ ದಿನದ ಪ್ರಾಮುಖ್ಯತೆ ಕುರಿತು ಮಾತನಾಡಿದರು.
ಕೆಎಂಸಿ ಆಸ್ಪತ್ರೆಯ ಮುಖ್ಯ ಪ್ರಾದೇಶಿಕ ಕಾರ್ಯಾಚರಣೆ ಅಧಿಕಾರಿ ಸಘೀರ್ ಸಿದ್ಧಿಕಿ, ಎಂಎಎಚ್‌ಇ, ಮಂಗಳೂರು ಕ್ಯಾಂಪಸ್‌ನ ಪ್ರೊ. ವಿಸಿ ಡಾ. ದಿಲೀಪ್ ಜಿ. ನಾಯಕ್, ಮಂಗಳೂರಿನ ಕೆಎಂಸಿಯ ಡೀನ್ ಡಾ. ಬಿ. ಉನ್ನಿಕೃಷ್ಣನ್, ಇಂಟರ್‌ವೆನ್ಷನಲ್ ಕಾರ್ಡಿಯಾಲಾಜಿಸ್ಟ್‌ಗಳಾದ ಡಾ. ಎಂ.ಎನ್. ಭಟ್, ಡಾ. ರಾಜೇಶ್ ಪೈ, ಕಾರ್ಡಿಯಾಕ್ ಎಲೆಕ್ಟ್ರೋಫಿಜಿಸಿಸ್ಟ್ ಡಾ. ಮನೀಶ್ ರೈ, ಕಾರ್ಡಿಯೋಥೊರಾಕಿಕ್ ಮತ್ತು ವಾಸ್ಕ್ಯೂಲಾರ್ ಶಸ್ತ್ರಕ್ರಿಯಾ ತಜ್ಞರಾದ ಡಾ. ಮಾಧವ್ ಕಾಮತ್ ಮತ್ತು ಡಾ. ಸೂರಜ್ ಪೈ, ಮಂಗಳೂರು ಕೆಎಂಸಿ ಆಸ್ಪತ್ರೆಯ ಹೃದಯ ಶಸ್ತ್ರಕ್ರಿಯಾ ತಜ್ಞರಾದ ಡಾ. ಹರೀಶ್ ರಾಘವನ್ ಮತ್ತು ಡಾ. ಐರೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net