ಲಂಚ ಪಡೆಯುವ ವೇಳೆ ಎಸಿಬಿಗೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ

Acb
Published on

ಮಂಡ್ಯ: ಲಂಚ ಪಡೆಯುತ್ತಿದ್ದ ವೇಳೆಯೇ ಮಹಿಳಾ ಅಧಿಕಾರಿಯನ್ನು ಎಸಿಬಿ ವಶಕ್ಕೆ ಪಡೆದಿದೆ. ಪೆಟ್ರೋಲ್ ಬಂಕ್ ಎನ್‌ಓಸಿ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಶುಕ್ರವಾರ ದಾಳಿ ನಡೆಸಿತ್ತು.

ಎನ್‌ಓಸಿ ನೀಡುವುದಕ್ಕೆ 30 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಮುಂಗಡವಾಗಿ 15 ಸಾವಿರ ರೂ ಲಂಚ ಪಡೆಯುವಾಗ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿ ಹೇಮಲತಾರನ್ನು ವಶಕ್ಕೆ ಪಡೆದು ಎಸಿಬಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಎಸಿಬಿ ಡಿವೈಎಸ್ಪಿ ಧರ್ಮೇಂದ್ರ, ಪಿಎಸ್‌‌ಐಗಳಾದ ಪುರುಷೋತ್ತಮ್, ವಿನೋದ್ ರಾಜ್ ನೇತೃತ್ವದಲ್ಲಿ ಎಸಿಬಿ ಸಿಬ್ಬಂದಿ ವೆಂಕಟೇಶ್, ಮಹದೇವು, ಕುಮಾರ, ಪಾಪಣ್ಣ, ಮಹೇಶ್ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net