ಮಗು ನೋಡಲು ಬಾರದ ಮಹಿಳೆ, ಅಧಿಕಾರಿಗಳಿಂದ ಹುಡುಕಾಟ

Published on

ಕೊಪ್ಪಳ: ಕಾರಟಗಿ ತಾಲೂಕು ಚಳ್ಳೂರು ಗ್ರಾಮದ ದೇವಮ್ಮ ಗಂಡ ಚೌಡಪ್ಪ ಹಡಪದ (ಹುಳ್ಕಿಹಾಳ) ಎಂಬ ಮಹಿಳೆ ತನ್ನ ಎರಡು ವರ್ಷದ ಗಂಡು ಮಗುವನ್ನು ಕೌಟುಂಬಿಕ ಕಾರಣದಿಂದ ಪಾಲನೆ ಮತ್ತು ರಕ್ಷಣೆಗಾಗಿ ೨೦೨೨ರ ಮಾರ್ಚ್ ೧೭ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿದ್ದಳು. ೨೦೨೩ರ ಜನೆವರಿ ೧ರಂದು ಮಗು ನೋಡಿ ಹೋದವರು ಮತ್ತೆ ವಾಪಸ್ ಆಗದ ಕಾರಣ ಅಧಿಕಾರಿಗಳು ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.

ಚಳ್ಳೂರಿನ ಮಹಿಳೆ ತಾಯಿ ಮನೆ ಹಾಗೂ ಹುಳ್ಕಿಹಾಳ ಗ್ರಾಮದ ಗಂಡನ ಮನೆಗೆ ಭೇಟಿ ನೀಡಿದರೂ ಮಹಿಳೆ ಸಿಕ್ಕಿಲ್ಲ. ಸಂಬಂಧಿಗಳನ್ನು ವಿಚಾರಿಸಿದರೂ ಮಾಹಿತಿ ದೊರೆತಿಲ್ಲ. ಮಗುವಿನ ಭವಿಷ್ಯ ದೃಷ್ಟಿಯಿಂದ ತಾಯಿ ಪತ್ತೆ ಮಾಡಬೇಕಿದ್ದು, ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ದತ್ತು ವಾರ್ಗಸೂಚಿ-೨೦೨೨ ಅನ್ವಯ ದತ್ತು ಕೇಂದ್ರದಲ್ಲಿ ಮಗುವನ್ನು ಅಲ್ಪಾವಧಿಗೆ ವಾತ್ರವೇ ದಾಖಲಿಸಬಹುದು. ಮಕ್ಕಳ ರಕ್ಷಣೆ ಕಾಯ್ದೆ ಅನ್ವಯ ಮಗು ಕುಟುಂಬದ ವಾತಾವರಣದಲ್ಲಿ ಬೆಳೆಯಬೇಕು. ಸಾಧ್ಯವಾಗದಿದ್ದಲ್ಲಿ ಸಾಂಸ್ಥಿಕ ಪೋಷಣೆ ಕೊನೆ ಆದ್ಯತೆ ಆಗಿರಲಿದೆ. ಹೀಗಾಗಿ ಬಾಲಕನ ತಾಯಿ ದೇವಮ್ಮ ಅವರ ಸಂಬಂಧಿಗಳಿದ್ದಲ್ಲಿ ೧೫ದಿನದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಬೇಕು. ಮಗುವಿನ ಭವಿಷ್ಯ ದೃಷ್ಟಿಯಿಂದ ಸಾರ್ವಜನಿಕರು ದೇವಮ್ಮ ಬಗ್ಗೆ ಮಾಹಿತಿ ದೊರೆತಲ್ಲಿ ತಿಳಿಸುವಂತೆ ಮನವಿ ಮಾಡಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಟಕ, ಜಿಲ್ಲಾಡಳಿತ ಭವನ, ಕೊಪ್ಪಳ-೦೮೫೩೯೨೨೫೦೩೦, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಯುನಿಯನ್ ಬ್ಯಾಂಕ್ ಹಿಂದುಗಡೆ, ಹೊಪೇಟೆ ರಸ್ತೆ ಕೊಪ್ಪಳ ೯೨೪೨೨೧೩೩೩೪, ಮಕ್ಕಳ ಸಹಾಯವಾಣಿ ೧೦೯೮/೧೧೨ ಗೆ ಸಂಪರ್ಕಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net