

ಹುಬ್ಬಳ್ಳಿ: ಮಹಿಳಾ ಸಾಹಿತ್ಯವು ಪುರುಷ ಸಾಹಿತ್ಯಕ್ಕಿಂತ ವಿಭಿನ್ನವಾಗಿದ್ದು, ವಾಸ್ತವತೆಗೆ ಹೆಚ್ಚು ಒತ್ತು ನೀಡುತ್ತದೆ. ಹಾಗಾಗಿ ಎಲ್ಲ ವರ್ಗದವರನ್ನೂ ಸೆಳೆಯುತ್ತದೆ ಎಂದು ಕರ್ನಾಟಕ ಪತ್ರಗಾರ ವಿಭಾಗದ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಹೇಳಿದರು.
ಧಾರವಾಡ ರಂಗಾಯಣದಲ್ಲಿ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ತಾಲೂಕು ಗ್ರಾಮೀಣ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಅವಕಾಶವಿರಲಾರದು. ದೈನಂದಿನ ಸಂಗತಿಗಳನ್ನೇ ಪ್ರಧಾನವಾಗಿಟ್ಟುಕೊಂಡು ರಚನೆಯಾಗಿರುತ್ತದೆ. ಮಹಿಳಾ ಸಾಹಿತ್ಯವನ್ನು ಎಂದಿಗೂ ಕಳೆಗುಂದದ ಸಾಹಿತ್ಯ ಎನ್ನಲಾಗುತ್ತದೆ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿಗಳು ಶಂಕರ ಕುಂಬಿ ಮಾತನಾಡಿದರು.
ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಗಂಗಾಧರ ದೊಡ್ಡವಾಡ, ಹುಬ್ಬಳ್ಳಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷೆ ಸುಮಾದೇವಿ ಹಿರೇಮಠ, ಶಹರ ಘಟಕದ ಅಧ್ಯಕ್ಷೆ ಡಾ. ಸರ್ವಮಂಗಳ ಕುದರಿ, ಮಾರ್ಗದರ್ಶಕಿ ಮಹಾದೇವಿ ಕೊಪ್ಪದ, ಸಾಹಿತಿ ಸುಧಾ ಕಬ್ಬೂರ, ಡಾ. ವೀಣಾ ಬಿರಾದಾರ, ಲಕ್ಷ್ಮೀ ಬಿಜ್ಜರಗಿ, ವೀಣಾ ಪರಮಾದಿ, ಪದ್ಮಾವತಿ, ಮಂಗಲಾ ನರವಣಿ, ಜಯಶ್ರೀ ನಿಂಬರಗಿ ವಂದನಾ ಕರಾಳೆ ಅನ್ನಪೂರ್ಣ ಪಾಟೀಲ ಉಪಸ್ಥಿತರಿದ್ದರು.
ಧಾರವಾಡ ತಾಲೂಕು ಗ್ರಾಮೀಣ ಘಟಕದ ನೂತನ ಗೌರವಾಧ್ಯಕ್ಷರಾಗಿ ಹೇಮಲತಾ ನೇಕಾರ, ಅಧ್ಯಕ್ಷರಾಗಿ ಉಮಾ ಅಗಡಿ, ಉಪಾಧ್ಯಕ್ಷರಾಗಿ ರಾಜರಾಜೇಶ್ವರಿ ಪಾಟೀಲ, ಆಶಾ ಸೈಯ್ಯದ್ ಪ್ರಧಾನ ಕಾರ್ಯದರ್ಶಿಯಾಗಿ ಸುವರ್ಣ ತಾಳಿಕೋಟಿ, ವೀಣಾ ಹಿರೇಮಠ, ಸಂಘಟನಾ ಕಾರ್ಯದರ್ಶಿಗಳಾಗಿ ವನಮಾಲ ಹಿರೇಮಠ, ಮೀನಾಕ್ಷೀ ತೋಟಿಗೇರ, ಮೇಘನಾ ಹಿರೇಮಠ, ಖಜಾಂಚಿಯಾಗಿ ರೂಪಾ ಅಡಕೆ, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುಜಾತಾ ಹಡಗಲಿ, ಸುಜಾತಾ ಭಜಂತ್ರಿ, ಸವಿತಾ ಭಜಂತ್ರಿ, ದಾನಮ್ಮ ಬಿಜಾಪುರ, ನಂದಾ ಪಾಟೀಲ, ಉಮಾ ಭಜಂತ್ರಿ ಆಯ್ಕೆಯಾದರು.