ಮಹಿಳೆಯರು ಸಂಘಟಿತರಾದರೆ ಬಲ

12ATHANI1
ಅಥಣಿಯ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಲಲಿತಾ ಮೇಕನಮರಡಿ, ಸುಮೇದಾ ಮಿರಜ, ಡಾ.ಸುಧಾ ಗಾಣಿಗೇರ, ಪ್ರಭಾವತಿ ಬಳೊಳ್ಳಿ ಇತರರಿದ್ದರು.
Published on

ಅಥಣಿ: ಮಹಿಳೆಯರು ಸಂಘಟಿತರಾಗಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇನ್ನರ್‌ವ್ಹೀಲ್ ಕ್ಲಬ್ ಸಹಕಾರಿ ಎಂದು ಇನ್ನರ್‌ವ್ಹೀಲ್ ಅಧಿಕಾರಿ ಸುಮೇದಾ ಮಿರಜ ಹೇಳಿದರು

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಟ್ಟಣದ ಇನ್ನರ್‌ವ್ಹೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೋಟರಿ ಕ್ಲಬ್‌ನಂತೆ ಇನ್ನರ್‌ವ್ಹೀಲ್ ಕ್ಲಬ್ ಒಂದು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯಾಗಿದು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ಸದಸ್ಯರ ಸಹಭಾಗಿತ್ವ ಅವಶ್ಯ ಎಂದರು. ಅಧ್ಯಕ್ಷೆ ಲಲಿತಾ ಮೇಕನಮರಡಿ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಅನೇಕ ಸಾಮಾಜಿಕ ಕಾರ್ಯ ಆಯೋಜಿಸೋಣ ಎಂದರು. ವೈಶಾಲಿ ಮಠಪತಿ ಕಾರ್ಯದರ್ಶಿಯಾಗಿ, ಡಾ.ಸುಧಾ ಗಾಣಿಗೇರ ಖಜಾಂಚಿಯಾಗಿ ಪದಗ್ರಹಣ ಮಾಡಿದರು. ತೃಪ್ತಿ ಕುಲಕರ್ಣಿ, ಪದ್ಮಾ ಅಥಣಿ, ಮಹಾದೇವಿ ಪಾಟೀಲ, ಸುರೇಖಾ ಪಾಟೀಲ ಸೇರಿ ರೋಟರಿ ಕ್ಲಬ್ ಅಧ್ಯಕ್ಷ ಅನಿಲ ದೇಶಪಾಂಡೆ, ಕಾರ್ಯದರ್ಶಿ ಅರುಣ ಸೌದಾಗರ, ಡಾ.ಪ್ರಮೋದ ಮಿರಜ, ಶ್ರೀಕಾಂತ ಅಥಣಿ, ಸುರೇಶ ಬಳೊಳ್ಳಿ, ಸುರೇಶ ಪಾಟೀಲ, ಡಾ.ಅಮತ ಕುಲಕರ್ಣಿ, ಡಿ.ಡಿ.ಮೇಕನಮರಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net