

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳೆ ತನ್ನ ಕುಟುಂಬದ ನಿರ್ವಹಣೆಯಲ್ಲಿ ತನ್ನ ವೈಯಕ್ತಿಕ ಆರೋಗ್ಯದ ಕಡೆಗೆ ನಿರ್ಲ ವಹಿಸುತ್ತಾಳೆ. ಇದರಿಂದ ಆಕೆ ಮುಂಬರುವ ದಿನಗಳಲ್ಲಿ ಅನೇಕ ರೋಗಗಳಿಗೆ ತುತ್ತಾಗುತ್ತಾಳೆ. ಆದ್ದರಿಂದ ಮಹಿಳೆ ತನ್ನ ಆರೋಗ್ಯದ ಕಡೆಗೆ ಗಮನಹರಿಸಿದಲ್ಲಿ ತನ್ನ ಕುಟುಂಬವೂ ಸ್ವಾಸ್ಥ$್ಯದಿಂದಿರಲು ಸಾಧ್ಯ ಎಂದು ಡಾ. ತೇಜಸ್ವಿನಿ ಹಿರೇಮಠ ಹೇಳಿದರು.
ನಗರದ ಕರಿಯಮ್ಮದೇವಿ ಮಹಿಳಾ ಮಂಡಳವು ಭಾನುವಾರ ಆಚರಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಮಹಿಳೆ ಸ್ವಾಭಿಮಾನದಿಂದ ಬದುಕಬೇಕು ಹಾಗೂ ತನ್ನ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕು. ವೈದ್ಯರಿಂದ ಆರೋಗ್ಯ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಸಭೆಯ ಅಧ್ಯತೆಯನ್ನು ರೇಣುಕಾ ಕೇಸರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯಲ$್ಮ ಭಗವತಿಯವರ ನೇತೃತ್ವದಲ್ಲಿ ಮಹಿಳೆಯರು ್ಯಾಶನ್ ಶೋ ಮಾಡಿದರು. ಅಕ್ಕಮಹಾದೇವಿ ಕಳ್ಳಿ ಶಾಂತಾ ಗೌಡರ, ಗಂಗವ್ವ ನತಿರ್, ಅನಿತಾ ಜಕಬಾಳ ಡಾ. ಸಂಗೀತ ಹುಡೇದ, ಡಾ. ಅನುಶ್ರೀ ಕಳ್ಳಿ, ಶಿವಲೀಲಾ ಅಡವಿ, ಶ್ರೀದೇವಿ ಗುಡ್ಲಾನೂರ , ನೇತ್ರಾವತಿ ಕೊತ್ಲನ ಇತರರು ಇದ್ದರು.