

ಹುಬ್ಬಳ್ಳಿ: ನಗರದ ಇನ್‌ಸ್ಟಿಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್‌ನ (ಐಇಎಂಎಸ್) ಎಂಬಿಎ ಕಾಲೇಜ್‌ನಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಉದ್ಯಮಿ ಪ್ರಮೀಳಾ ನಾಯಕ್ ಉದ್ಘಾಟಿಸಿ ಮಾತನಾಡಿ, ಪ್ರತಿ ಸವಾಲು ಸ್ವೀಕರಿಸುವ ವ್ಯಕ್ತಿತ್ವ ಮಹಿಳೆಯರಲ್ಲಿದೆ. ಲಿಂಗ ಸಮಾನತೆ ಉಳಿಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕು. ಸಮಾನ ಅವಕಾಶ, ಶಿಕ್ಷಣ, ಉದ್ಯೋಗ, ಸುರಕ್ಷತೆ ದೃಷ್ಟಿಯ ನೀತಿ-ನಿರೂಪಣೆಗಳು ಅನುಷ್ಠಾನಗೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ಕುಟುಂಬ, ಸಮುದಾಯ ಅಭಿವೃದ್ಧಿ ಹೊಂದಲಿದೆ. ದೇಶವೂ ಮಹೋತ್ತರವಾಗಿ ಬೆಳೆಯಲಿದೆ ಎಂದರು.
ಆಡಳಿತ ಮಂಡಳಿಯ ಸದಸ್ಯರಾದ ಗಿರಿಜಾ ಹಿರೇಮಠ, ದೀಪ್ತಿ, ಪೂಜಾ ಚರಂತಿಮಠ ಉಪಸ್ಥಿತರಿದ್ದರು.
ಪ್ರೊ. ಸ್ವಪ್ನ ಕಾಮಡೊಳ್ಳಿ ಸ್ವಾಗತಿಸಿದರು. ಸ್ನೇಹಾ ನಾಯಕ್ ಪ್ರಾರ್ಥಿಸಿದರು. ಪ್ರೊ. ಪ್ರೀತಿ ಗೌಡರ ವಂದಿಸಿದರು. ರಮ್ಯಾ ಮೇಟಿ ನಿರೂಪಿಸಿದರು.