

ಶಿವಾನಂದ ಹಿರೇಮಠ, ಗದಗ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ನಡೆಸುತ್ತ ಮಹಿಳಾ ಬಲವರ್ಧನೆಗೆ ದುಡಿಯತ್ತಿರುವ ಮಹಿಳಾ ಸ್ವಹಾಯ ಸಂಘಗಳಿಗೆ ಸರ್ಕಾರದಿಂದ ಕೊಡ ಮಾಡುವ ಮೂಲ ಅನುದಾನವನ್ನು ಶೇ.90 ರಷ್ಟು ಕಡಿತಗೊಳಿಸಲಾಗಿದೆ. ಈ ಹಿನ್ನೆಲೆ ಗ್ರಾಮೀಣ ಭಾಗದ ಮಹಿಳಾ ಸಂಘಗಳ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಅನುದಾನಕ್ಕಾಗಿ ಅಜಿರ್ ಸಲ್ಲಿಸಿದ ಸದಸ್ಯರಲ್ಲಿ ಗೊಂದಲ ಸೃಷ್ಟಿಯಾಗಿದೆ. "ಸಂಘದ ಪ್ರತಿ ಸದಸ್ಯರಿಗೆ ಬದಲಾಗಿ, ಸಂಘ ಓರ್ವ ಸದಸ್ಯರಿಗೆ ಮಾತ್ರ ಅನುದಾನ ವಿತರಿಸುವ ಹೊಸ ಸುತ್ತೊಲೆ'ಯಿಂದ ಸ್ವಸಾಹಯ ಸಂಘದ ಸದಸ್ಯರಲ್ಲೇ ಅನುದಾನ ಪಡೆಯಲು ಪೈಪೋಟಿ ಶುರುವಾಗಿದೆ.
ಸ್ವಸಹಾಯ ಸಂಘದ ಪ್ರತಿ ಸಂದಸ್ಯರಿಗೆ ಆಹಾರ ಸಂಸ್ಕರಣೆಯ ಕಿರು ಉದ್ದಿಮೆ ನಡೆಸಲು ತಲಾ ಸದಸ್ಯರಿಗೆ 40 ಸಾವಿರದಂತೆ ಮೂಲಧನ ವಿತರಿಸುವ ಆದೇಶ ಹೊರಡಿಸಲಾಗಿತ್ತು. ಈ ಹಿನ್ನೆಲೆ ಪ್ರತಿ ಸಂಗಳಿಗೂ 4 ಲಕ್ಷ ಅನುದಾನ ಒದಗಿ ಬರುತ್ತಿತ್ತು. ಆದರೆ, ರಾಜ್ಯ ಸರ್ಕಾರ ತನ್ನ ಆದೇಶವನ್ನು ಪರಿಷ್ಕರಿಸಿದೆ. ರಾಜ್ಯ ಸರ್ಕಾರದಲ್ಲಿ ಅನುದಾನ ಕೊರತೆ ಹಿನ್ನೆಲೆ ಸಂದ ಸದಸ್ಯರೊಬ್ಬರಿಗೆ ಮಾತ್ರ ಕಿರು ಉದ್ದಿಮೆ ನಡೆಸಲು 40 ಸಾವಿರ ರೂ, ಅನುದಾನ ಒದಗಿಸಲು ಆದೇಶಿಸಿದೆ. ಈಗಾಗಲೇ ಲಾನುಭವಿ ಸಂಘದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಈಗ ಸ್ವಸಹಾಯ ಸಂಘದ ಬದಲಾಗಿ ಓರ್ವ ಸದಸ್ಯರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದೆ.
2022 - 23ನೇ ಸಾಲಿನಲ್ಲಿ ರಾಜ್ಯದ 2 ಲಕ್ಷ ಸದಸ್ಯರಿಗೆ (20 ಸಾವಿರ ಸಂ) ತಲಾ 40 ಸಾವಿರ ರೂ. ಅನುದಾನ ವಿತರಿಸುವ ಗುರಿ ನಿಗದಿಪಡಿಸಲಾಗಿತ್ತು. ಈಗ ಏಕಾಏಕಿ 2 ಲಕ್ಷ ಸದಸ್ಯರಿಗೆ ಬದಲಾಗಿ ರಾಜ್ಯದ 4083 ಸಂದ ಸದಸ್ಯರಿಗೆ ಇಳಿಕೆ ಮಾಡಿದೆ. ರಾಜ್ಯ ಸರ್ಕಾರದಲ್ಲಿ ಅನುದಾನ ಕೊರತೆಯಿಂದ ಲಾನುಭಿಗಳನ್ನು ಕಡಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಹಂಚಿಕೆ ಹೇಗೆ?
ಕೇಂದ್ರ ಹಾಗೂ ರಾಜ್ಯ ಸರ್ಕಾರದ 60:40 ಅನುಪಾತದಲ್ಲಿ ಒದಗುವ ಅನುದಾನವನ್ನು ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಯು ಸ್ವಸಾಹಯ ಸಂದ ಪ್ರತಿ ಸದಸ್ಯರಿಗೂ ರಾಜ್ಯದ ಕೆೆಕ್ ಸಂಸ್ಥೆ ಮೂಲಕ ಅನುದಾನ ವಿತರಿಸಲಾಗುತ್ತಿದೆ. ಸ್ವಸಹಾಯ ಸಂಗಳಿಗೆ ರಾಜ್ಯ ಸರ್ಕಾರ ಹಂಚಿಕೆ ಮಾಡುವ ಶೇ.40 ರಷ್ಟು ಅನುದಾನಕ್ಕೆ ಕೊರತೆ ಎದುರಾಗಿದೆ ಎಂದು ತಿಳಿದು ಬಂದಿದೆ.
ಗುರಿ ನಿಗದಿ? 2022 - 23ರಲ್ಲಿ 2000 ಸಂಘಗಳಿಗೆ ಅನುದಾನ ವಿತರಿಸುವ ಗುರಿ ಹೊಂದಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತ್ಯಧಿಕ 1200 ಸಂಘ, ಕಲಬುರಗಿ ವ್ಯಾಪ್ತಿಗೆ 850 ಸಂಘಗಳಿಗೆ, ಗದಗ 600 ಸಂಘಗಳಿಗೆ, ಬೀದರ್ 650 ಸೇರಿ ರಾಜ್ಯದ ಎಲ್ಲ ಸಂಘಗಳಿಗೆಗಾಗಿ 80 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. 2023 24ರ ಜೂನ್ ತಿಂಗಳಲ್ಲಿ ಸಂಘಗಳಿಗೆ ಬದಲಾಗಿ 1950 ಸದಸ್ಯರಿಗೆ ಅನುದಾನ ಇಳಿಕೆ ಮಾಡಿದ ಸರ್ಕಾರ ಜು.24 ರಂದು ಆದೇಶ ಮತ್ತೊಮ್ಮೆ ಪರಿಷ್ಕರಿಸಿದ ರಾಜ್ಯ ಸರ್ಕಾರ 4083 ಸದಸ್ಯರಿಗೆ ಅನುದಾನ ಮಿತಿಗೊಳಿಸಿದೆ.