2.5 ಲಕ್ಷ ಮೌಲ್ಯದ ಮಾಂಗಲ್ಯ ಸರ ಸುಲಿಗೆ

udp-chain
Published on

ಉಡುಪಿ: ಮೂಡನಿಡಂಬೂರು ಗ್ರಾಮದ ನಾಯರ್‌ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ರಸ್ತೆಯಲ್ಲಿ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಇಬ್ಬರು ಯುವಕರು ಎಳೆದುಕೊಂಡು ಪರಾರಿಯಾಗಿದ್ದಾರೆ.

ಬ್ರಹ್ಮಗಿರಿ ನಿವಾಸಿ ವಿಜಯ ಎಂಬುವವರು ಬುಧವಾರ ಬೆಳಗ್ಗೆ 6:10ಕ್ಕೆ ವಾಕಿಂಗ್ ಹೋಗುತ್ತಿದ್ದಾಗ ಹಿಂದಿನಿಂದ ಮೋಟಾರ್‌ ಸೈಕಲಿನಲ್ಲಿ ಬಂದ ಅಂದಾಜು 20 ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರ ಪೈಕಿ, ಹಿಂದೆ ಕೂತಿದ್ದವನು ಏಕಾಏಕಿ ಕುತ್ತಿಗೆಗೆ ಕೈ ಹಾಕಿ ತಳ್ಳಿ, ನೆಲಕ್ಕೆ ಬೀಳಿಸಿ, ಕುತ್ತಿಗೆಯಲ್ಲಿದ್ದ ಅಂದಾಜು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net