

ವಿಜಯವಾಣಿ ಸುದ್ದಿಜಾಲ ಗದಗ
ದುಡಿಯುವ ಮಹಿಳೆಯರ ಪ್ರಥಮ ಸಮಾವೇಶವು ನಗರದ ಡಾ. ಬಾಬಾ ಜಗಜೀವನರಾಮ್ ಸಮುದಾಯ ಭವನದಲ್ಲಿ ಗುರುವಾರ ಜರುಗಿತು.
ಮಹಿಳಾ ಸಮನ್ವಯ ಸಮಿತಿ ರಾಜ್ಯ ಸಂಚಾಲಕಿ ಎಚ್. ಎಸ್. ಸುನಂದಾ ಮಾತನಾಡಿ, ಮಹಿಳೆಯ ಸಮಾನತೆ, ನ್ಯಾಯಕ್ಕಾಗಿ ಮತ್ತು ಶೋಷಣೆ ತಾರತಮ್ಯ ಹಾಗೂ ಹಿಂಸೆ ಮುಕ್ತ ಜೀವನಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಟುಂಬದ ಒಳಗೆ ಮತ್ತು ಹೊರಗೆ ವಿವಿಧ ಪಾತ್ರಗಳನ್ನು ಮಹಿಳೆ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ 3 ಉಡಾವಣೆ ನಿರ್ವಹಣೆಯಿಂದ ಹಿಡಿದು ಸರ್ಕಾರಿ, ಖಾಸಗಿ, ಸ್ವಯಂ ಕೆಲಸ, ಕೃಷಿ, ಕಟ್ಟಡ ಮತ್ತು ನಿರ್ಮಾಣ, ಅಸಂಟಿತ ವಲಯಗಳು ಸೇರಿದಂತೆ ವಿವಿಧ ೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಕೌಟುಂಬಿಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ದುಡಿಯುವ ಮಹಿಳೆಯಾಗಿ ಶೋಷಣೆ ತಾರತಮ್ಯ, ವಂಚನೆ, ಹಿಂಸೆ ಮತ್ತು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ. ಈ ಶೋಷಣೆಯಿಂದ ಮುಕ್ತಿ ದೊರೆಯಬೇಕೆಂದೆರೆ ಮಹಿಳಾ ಸ್ವಾಲಮಭಿ ಬದುಕು ಸಾಗಿಸಬೇಕು ಎಂದರು.
ಈ ಹಿಂದಿನ ಸರ್ಕಾರ ಕಾರ್ಖಾನೆಗಳಲ್ಲಿ ಈಗಿರುವ 9 ಗಂಟೆಗಳ ದುಡಿತದ ಅವಧಿಯನ್ನು 12 ಗಂಟೆಗೆ ಏರಿಸಿದಲ್ಲದೆ ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಈಗಿನ ಸರ್ಕಾರ ಅದನ್ನು ಹಿಂಪಡೆಯಲು ಮುಂದಾಗುತ್ತಿಲ್ಲ ಎಂದು ಎಚ್. ಎಸ್. ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳಿಗೆ ಆಗ್ರಹ:
ಕಾರ್ಯಕ್ರಮದಲ್ಲಿ ಅಂಗನವಾಡಿ, ಬಿಸಿಯೂಟ ಆಶಾ ಮತ್ತು ಇತರೇ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರನನ್ನು ನೌಕರರನ್ನಾಗಿ ಕ್ರಮಬದ್ಧಗೊಳಿಸಿ ಕನಿಷ್ಠ ಕೂಲಿ, ಗ್ರಾಚುಟಿ ವಿತರಣೆ, ಉದ್ಯೋಗ ಖಾತರಿ ಯೋಜನೆಯಲ್ಲಿ ದಿನಕ್ಕೆ 600 ರೂ. ನಂತೆ 200 ದಿನಗಳ ಕೆಲಸ, ಸಮಾನ ವೇತನ, ಕಾಮಿರ್ಕರ ಕುಟುಂಬಗಳಿಗೆ ಪಿಂಚಣಿ, ಮಹಿಳೆಯರ ಮೇಲೆ ದೌರ್ಜನ್ಯವನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ, ನಿರ್ಭಯಾ ನಿಧಿಯ ಹಂಚಿಕೆ ದ್ವಿಗುಣಗೊಳಿಸುವುದು, ಶೇ. 33 ಮೀಸಲಾತಿ ಕಾನೂನು ತಣ ಜಾರಿ, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಗೆ ಮೇಲಾಧಾರ ಮತ್ತು ಬಡ್ಡಿರಹಿತ ಸಾಲ ನೀಡುವುದು ಸೇರಿದಂಯೆ ವಿವಿಧ ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ ಇತಿಹಾಸದ ಹುಣ್ಣುಗಳು, ಭಾರತದ ಕುರುಡುಗಳು ಮತ್ತು ಹಿಂದೂತ್ವದ ಹುನ್ನಾರಗಳು ಕುರಿತ ಮಣಿಪುರದ ದುರಂತ ಕಥನ ಎಂಬ ಪುಸ್ತಕವನ್ನು ಸಮಾವೇಶದಲ್ಲಿ ಮಹಿಳೆಯರಿಗೆ ವಿತರಿಸಲಾಯಿತು.
ಮಹೇಶ ಹಿರೇಮಠ ಪ್ರಾಸ್ತಾವಿಕ ಮಾತಬಾಡಿದರು. ಪೂಜಾ ಸಿಂ, ಯಶೋಧಾ ಬೆಟಗೇರಿ, ನಿಂಗಮ್ಮ ತಡಹಾಳ, ನೀಲಮ್ಮ ಬಾರದ್ವಾಡ ಸೇರಿದಂತೆ ಮಹಿಳೆಯರು ಭಾಗವಹಿಸಿದ್ದರು.