ಸಂಕಷ್ಟಗಳನ್ನು ಮಹಿಳೆಯರು ಧೈರ್ಯದಿಂದ ಎದುರಿಸಿ

spoorthi
Published on

ಹುಬ್ಬಳ್ಳಿ: ಮಹಿಳಾ ದಿನಾಚರಣೆ ನಿಮಿತ್ತ ಸ್ಫೂರ್ತಿ ಟ್ರಸ್ಟ್ ವತಿಯಿಂದ ಧಾರವಾಡ ರಂಗಾಯಣದ ಸುವರ್ಣ ಸಮುಚ್ಛಯ ಭವನದಲ್ಲಿ ಮಹಿಳೆಯರಿಗಾಗಿ ನೃತ್ಯ ಹಾಗೂ ವೇಷಭೂಷಣ ಸ್ಪರ್ಧೆಯನ್ನು ಬುಧವಾರ ಏರ್ಪಡಿಸಲಾಗಿತ್ತು.
ಐಎಂಎ ಧಾರವಾಡ ಮಹಿಳಾ ಘಟಕದ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಮಾತನಾಡಿ, ಮಹಿಳೆಯರು ಕಷ್ಟ-ಕೋಟಲೆಗಳಿಗೆ ಎದೆಗುಂದಬಾರದು. ಸೀತಾ ಮಾತೆಯಂತೆ ಧೈರ್ಯದಿಂದ ಎಲ್ಲವನ್ನೂ ಎದುರಿಸಬೇಕು. ಇಂದಿನ ದಿನಮಾನಗಳಲ್ಲಿ ಮಹಿಳೆಯರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕೂ ಮೊದಲು ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿಒಐ ಫೌಂಡೇಷನ್ ಸಂಸ್ಥಾಪಕಿ ಅಶ್ವಿನಿ ನಾಯಕ ಮಾತನಾಡಿ, ಮಹಿಳೆಯರು ಪುರಷರಷ್ಟೇ ಸಮಾನರು. ಪ್ರತಿಯೊಂದು ಕೆಲಸದಲ್ಲೂ ಅವರು ಪುರುಷರನ್ನು ಮೀರಿಸುವಷ್ಟು ಬಲಿಷ್ಠರು ಎಂದರು.
ಸ್ಫೂರ್ತಿ ಟ್ರಸ್ಟ್ ಅಧ್ಯಕ್ಷೆ ರೂಪಾ ಚೌಧರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಹಿಳೆಯರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಜಯಶ್ರೀ ಪಾಟೀಲ ಪ್ರಾರ್ಥಿಸಿದರು. ಸುನೀತಾ ಹೆಗಡೆ ಸ್ವಾಗತಿಸಿದರು. ವಿಜಯಲಕ್ಷ್ಮೀ ಕರಂಡಿ ವಂದಿಸಿದರು. ಸುಮಾ ಹಡಪದ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net