ಮಹಿಳಾ ಉದ್ಯಮಿಗಳು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ: ಎಂಡಿ ಶರೀಫ್​​ ಸಲಹೆ

women day
Published on

ಬೆಂಗಳೂರು: ಸರ್ಕಾರದ ವಿವಿಧ ಸವಲತ್ತುಗಳನ್ನು ಮಹಿಳಾ ಉದ್ಯಮಿಗಳು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಯೋಜನೆ) ಜಂಟಿ ನಿರ್ದೇಶಕ ಎಂಡಿ ಶರೀಫ್​​ ಸಲಹೆ ನೀಡಿದ್ದಾರೆ.

ಮಹಿಳಾ ಉದ್ಯಮಿಗಳ ವೇದಿಕೆ ಸಂಸ್ಥೆಯು ಎಫ್​​ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಮಹಿಳಾ ಉದ್ಯಮಶೀಲತೆ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಉತ್ಪಾದನಾ ವಲಯಗಳಿಗೆ ಶೇ.4 ಬಡ್ಡಿಗೆ ಸಾಲ ಸಿಗಲಿದೆ. ಕೆಲವೊಂದು ಮಹಿಳಾ ಉದ್ಯಮಿಗಳು ರೂಪಿಸುವ ಯೋಜನೆಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತವೆ. ಇಂಥ ಅವಕಾಶ ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಮಹಿಳೆಯರು ಉದ್ಯಮ ವ್ಯವಹಾರಕ್ಕೆ ಸಂಬಂಧ ವಿದೇಶಕ್ಕೆ ತೆರಳಲು ಅಥವಾ ವಿದೇಶಗಳಲ್ಲಿ ನಡೆಯುವ ಕೆಲ ಪ್ರದರ್ಶನಗಳಲ್ಲಿ ಅವರ ಉತ್ಪನ್ನಗಳನ್ನು ಪ್ರದರ್ಶಿಸಿಲು ಸರ್ಕಾರ ನೀಡುತ್ತಿದೆ. ಇಂಥ ಮಹಿಳೆಯರಿಗೆ ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಕೌನ್ಸಿಲ್ (ವಿಟಿಪಿಸಿ) ಶೇ.75 ವಿಮಾನ ಶುಲ್ಕ ಭರಿಸುತ್ತದೆ. ಮೂರು ದಿನ ಉಳಿದುಕೊಳ್ಳಲು ನೂರು ಡಾಲರ್ ಸಹಾಯಧನವೂ ನೀಡುತ್ತದೆ ಎಂದು ಶರ್ೀ ವಿವರಿಸಿದರು.

ಸ್ವಸಹಾಯ ಸಂಘಗಳಿಗೆ, ಸ್ವತಂತ್ರೃವಾಗಿ ಉದ್ಯಮ ನಡೆಸಲು ಇಚ್ಛಿಸುವ ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುವ ಬಗ್ಗೆ ಸೂಕ್ತ ಮಾಹಿತಿ ಇಲ್ಲದಂತಾಗಿದೆ. ಈ ಕೊರತೆ ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಉದ್ಯಮಿಗಳ ವೇದಿಕೆಯ ಅಧ್ಯಕ್ಷೆ ರೂಪಾ ರಾಣಿ ಹೇಳಿದರು.ಕಾಂಬೋಡಿಯಾದ ದೂತವಾಸ ಅಧಿಕಾರಿ ಕಾರ್ತಿಕ್ ತಲ್ಲಂ, ಕರಕುಶಲ ವಸ್ತುಗಳ ಪ್ರಚಾರ ಮಂಡಳಿ ದಕ್ಷಿಣ ಪ್ರದೇಶದ ಮುಖ್ಯಸ್ಥೆ ಪಿ.ಎಲ್.ಶ್ರೀದೇವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net