ಶಕ್ತಿ ಯೋಜನೆಯಿಂದ ಮಹಿಳಾ ಸಬಲೀಕರಣ

New bus launched
Published on

ಹಿರೇಕೆರೂರ: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಮಹಿಳಾ ಸಬಲೀಕರಣದ ಜತೆಗೆ ಆರ್ಥಿಕ ಭಾರ ಇಳಿಸುವ ಕೆಲಸ ಮಾಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ವಾಕರಸಾ ಸಂಸ್ಥೆಯ ಡಿಪೋಗೆ ಮಂಜೂರಾದ ಎರಡು ನೂತನ ಬಸ್​ಗಳನ್ನು ಶನಿವಾರ ಲೋಕಾರ್ಪಣೆಗೊಳಿಸಿ ಹಾಗೂ ಹಿರೇಕೆರೂರ-ಚಿಕ್ಕಮಗಳೂರ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಕ್ತಿ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಕ್ತಿ ಯೋಜನೆ ಜಾರಿ ನಂತರ, ಗಾರ್ವೆಂಟ್ಸ್ ಕೆಲಸಗಾರರು, ಮನೆಗೆಲಸ, ದಿನಗೂಲಿ ಕಾರ್ವಿುಕರು ಮತ್ತು ಅಸಂಘಟಿತ ವಲಯದವರಿಗೆ ಆರ್ಥಿಕವಾಗಿ ಅನುಕೂಲವಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ, ಪಪಂ ಸದಸ್ಯರಾದ ಕಂಠಾಧರ ಅಂಗಡಿ, ಸನಾವುಲ್ಲಾ ಮಕಾನದಾರ್, ತಾಪಂ ಮಾಜಿ ಅಧ್ಯಕ್ಷ ರಾಜೀವ ಬಣಕಾರ, ಗಣೇಶ ವರ್ಣೆಕರ, ಎಸ್.ವೈ. ಹೊರಕೇರಿ, ನಿಂಗರಾಜ ನಾಯ್ಕರ್, ಪಾಂಡುರಂಗ ರಾಯ್ಕರ್, ಆಂಜನೇಯ ಆರ್.ಎಚ್., ಸುರೇಶ ತಳವಾರ, ರವಿ ಬಣಕಾರ, ಪ್ರಯಾಣಿಕರು, ಘಟಕದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net