

ಹುಳಿಯಾರು: ಸರ್ಕಾರದ ಆದೇಶದಂತೆ ಜಿಪಂ ಹಾಗೂ ತಾಪಂ, ಗಾಪಂ ಮಟ್ಟದಲ್ಲಿ ಮಹಿಳಾ ಸ್ವಸಹಾಯ ಸಂಗಳನ್ನು ಒಳಗೊಂಡ ಸಂಜೀವಿನಿ ಒಕ್ಕೂಟ ರಚನೆ ವಾಡಿದ್ದು, ಅವುಗಳ ನಿರ್ವಹಣೆಯನ್ನು ಮಹಿಳಾ ಸದಸ್ಯರೇ ಮಾಡಬೇಕಾಗುತ್ತದೆ ಎಂದು ಚಿಕ್ಕನಾಯಕನಹಳ್ಳಿ ತಾಪಂ ತಾಲೂಕು ಮೆನೇಜರ್ ಭರತ್ ತಿಳಿಸಿದರು.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಪಾತಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದೊಡ್ಡಬಿದರೆ ಗ್ರಾಪಂ ಮಟ್ಟದ ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ವಾತನಾಡಿದರು.
ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ.ಕುವಾರಸ್ವಾಮಿ ವಾತನಾಡಿ, ಕೇವಲ 10-20 ಮಂದಿ ಮಹಿಳೆಯರು ಸೇರಿ ನಡೆಸುತ್ತಿದ್ದ ಸ್ವಸಹಾಯ ಸಂಗಳು ಇಂದು ಬೃಹದಾಕಾರವಾಗಿ ಬೆಳೆದು ಸರ್ಕಾರದ ಅನುದಾನದಿಂದಲೇ ಈ ಒಕ್ಕೂಟಗಳನ್ನು ರಚಿಸಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ ಎಂದರು.
ಜ್ಞಾನಜ್ಯೋತಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ.ಲಕ್ಷ್ಮೀ ವಾರ್ಷಿಕ ಸಭೆಯ ಲೆಕ್ಕಪತ್ರಗಳನ್ನು ಮಂಡಿಸಿ ವಾತನಾಡಿ, ಇನ್ನೂ ಹೆಚ್ಚು ಸಂಗಳನ್ನು ಸಂಜೀವಿನಿ ಒಕ್ಕೂಟಕ್ಕೆ ಸೇರ್ಪಡೆ ವಾಡಿಕೊಂಡು ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಲು ಎಲ್ಲ ರೀತಿಯ ವಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷೆ ದಾಕ್ಷಾಯಿಣಿ, ಕಾರ್ಯದರ್ಶಿ ಅಪ್ಸನ ಖಾನಂ, ಖಜಾಂಚಿ ಟಿ.ಎಲ್.ರಾಧಾ, ಸಿಆರ್‌ಪಿಗಳಾದ ಸವಿತಾ, ಇಂದ್ರಮ್ಮ, ಉಪಾಧ್ಯಕ್ಷೆ ಗೌರಮ್ಮ, ಸಹ ಕಾರ್ಯದರ್ಶಿ ಶಿವಮ್ಮ, ಕೃಷಿ ಸಖಿ ಕರಿಯಮ್ಮ ಪಶುಸಖಿ ಜ್ಯೋತಿ ಮತ್ತಿತರರು ಇದ್ದರು.