ಧರ್ಮಸ್ಥಳ ಸಂಘದಿAದ ಮಹಿಳಾ ಸಬಲೀಕರಣ: ಬಿ.ವೈ.ವಿಜಯೇಂದ್ರ

15srl1
ಶಿರಾಳಕೊಪ್ಪದ ಕಾಳಿಕಾ ದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವರಮಹಾಲಕ್ಷಿ÷್ಮ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ನಾಗರಾಜ್, ಶಶಿಕಲಾ ಶ್ರೀನಿವಾಸ್, ನಿವೇದಿತಾ ರಾಜು, ಕೆ.ಎಸ್.ಗುರುಮೂರ್ತಿ ಇತರರಿದ್ದರು.
Published on

ಶಿರಾಳಕೊಪ್ಪ: ಸಮಾಜದಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವುದರ ಜತೆಗೆ ಧಾರ್ಮಿಕ ಪ್ರe್ಞೆ ಮೂಡಿಸುವ ಮಹತ್ತರವಾದ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಶುಕ್ರವಾರ ನಗರದ ಕಾಳಿಕಾ ದೇವಾಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಸಾಮೂಹಿಕ ವರಮಹಾಲಕ್ಷಿ÷್ಮÃ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಲ್ಪನೆಗೂ ಮೀರಿದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಆರ್ಥಿಕ ಶಕ್ತಿಯನ್ನು ಕೊಡುವುದರ ಜತೆಗೆ ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯ ಆಶೀರ್ವಾದ ಪಡೆದು ಅಽಕಾರ ವಹಿಸಿಕೊಂಡರು. ಅಲ್ಲದೆ ನಮ್ಮ ದೇಶದ ರಾಷ್ಟçಪತಿ, ಹಣಕಾಸು ಸಚಿವೆಯೂ ಮಹಿಳೆ. ಹೀಗೆ ಇಂದು ಮಹಿಳೆ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾಳೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಮಹಿಳೆಯರಿಗೆ ಶಕ್ತಿ ತುಂಬಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು. ಇಂದು ಕೈಗೊಂಡಿರುವ ವರಮಹಾಲಕ್ಷಿ÷್ಮ ಪೂಜೆಯಲ್ಲಿ ನಾಡಿನಲ್ಲಿ ಬರಗಾಲ ಛಾಯೆ ದೂರ ಮಾಡಿ ಎಲ್ಲರಿಗೂ ಸುಖ ಸಂತೋಷ ತಂದುಕೊಡಲಿ ಎಂದು ಪ್ರಾರ್ಥಿಸೋಣ. ಜತೆಗೆ ಧರ್ಮಸ್ಥಳ ಸಂಘದ ಯೋಜನೆ ದೇಶದ ಕಟ್ಟಕಡೆಯ ಮಹಿಳೆಗೂ ತಲುಪುವಂತಾಗಲಿ ಎಂದರು.
ಪ್ರಾರಂಭದಲ್ಲಿ ಶಿರಸಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿರ್ದೇಶಕ ಬಾಬು ನಾಯಕ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ವೈಯುಕ್ತಿಕ ಅಭಿವೃದ್ಧಿ ಜತೆಗೆ ಸಮಾಜವೂ ಅಭಿವೃದ್ಧಿ ಹೊಂದಬೇಕು. ಬಡವರಿಗೆ ಊಟದ ವ್ಯವಸ್ಥೆ ಇಲ್ಲದಂತಹ ಕುಟುಂಬಕ್ಕೆ 18 ನಿತ್ಯಉಪಯೋಗಿಸುವ ವಸ್ತುಗಳನ್ನು ನೀಡಿದೆ. ಅಂಗವಿಕಲರಿಗೆ ವ್ಹೀಲ್‌ಚೇರ್ ವಿತರಿಸಿದ್ದು ರಾಜ್ಯದಲ್ಲಿ 87 ಕೋಟಿ ರೂ. ವೆಚ್ಚದಲ್ಲಿ 625 ಕೆರೆಗಳಲ್ಲಿ ಹೂಳು ತೆಗೆದು ಪುನಶ್ಚೇತನಗೊಳಿಸಲಾಗಿದೆ ಎಂದರು.
ಕಾಳಿಕಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ್, ಡಾ. ಶಶಿಕಲಾ ಶ್ರೀನಿವಾಸ, ಕೆಎಸ್‌ಡಿಎಲ್ ಮಾಜಿ ನಿರ್ದೇಶಕಿ ನಿವೇದಿತಾ ರಾಜು ಮಾತನಾಡಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಶಿಕಾರಿಪುರ ತಾಲೂಕು ಯೋಜನಾಽಕಾರಿ ನಂಜುAಡಿ, ಚೆನ್ನವೀರ ಶೆಟ್ಟಿ, ಪುರಸಭಾ ಸದಸ್ಯೆ ರಾಜೇಶ್ವರಿ ವಸಂತಕುಮಾರ್ ಇತರರಿದ್ದರು. ಸಂಘದ ಸದಸ್ಯರು ಕುಂಬದೊAದಿಗೆ ಮಹಾಲಕ್ಷಿ÷್ಮÃ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net