ಮಹಿಳಾ ಸಬಲೀಕರಣ ಹೊಸ ಭಾಷ್ಯ ಬರೆದ ಬಿಜೆಪಿ: ಟಿ.ಡಿ.ಮೇಘರಾಜ್

20 SGR 1
ಸಾಗರದಲ್ಲಿ ಬಿಜೆಪಿ ಮಹಿಳಾ ಘಟಕದಿಂದ ಸಿಹಿ ಹಂಚಿ ಸಂಭ್ರಮಿಸಲಾಯಿತು. ಟಿ.ಡಿ.ಮೇಘರಾಜ್, ಗಣೇಶ ಪ್ರಸಾದ್, ಪ್ರೇನಾ ಕಿರಣ್ ಸಿಂಗ್, ಪುರುಷೋತ್ತಮ್, ಸುಧಾ ಉದಯ್ ಇತರರಿದ್ದರು.
Published on

ಸಾಗರ: ಲೋಕಸಭೆಯಲ್ಲಿ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯ ಸ್ವಾಗತಿಸಿ ಬುಧವಾರ ಬಿಜೆಪಿ ಮಹಿಳಾ ಘಟಕದಿಂದAದ ಸಾಗರ ಹೋಟೆಲ್ ವೃತ್ತದಲ್ಲಿ ಸಂಭ್ರಮಿಸಿ ಸಿಹಿ ವಿತರಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಹಲವು ದಶಕಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿ ಕುರಿತು ಭರವಸೆ ನೀಡಿದ್ದನ್ನು ಬಿಟ್ಟರೆ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸಿರಲಿಲ್ಲ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ತಂದಿರುವುದನ್ನೇ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸಿತ್ತು. ಇದೀಗ ನರೇಂದ್ರ ಮೋದಿ ಸರ್ಕಾರ ಶೇ.೩೩ ಮೀಸಲಾತಿ ಜಾರಿಗೊಳಿಸಿ ಮಹಿಳಾ ಸಬಲೀಕರಣಕ್ಕೆ ಹೊಸ ಭಾಷ್ಯ ಬರೆದಿದೆ. ಕೇಂದ್ರದ ಈ ನಿರ್ಧಾರವನ್ನು ಪ್ರತಿ ಗಲ್ಲಿಗಳಲ್ಲಿ ಮಹಿಳೆಯರು ಸಂಭ್ರಮಿಸಬೇಕು, ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ಮಾತನಾಡಿ, ನಾರಿಶಕ್ತಿ ವಂದನಾ ಅಽನಿಯಮ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಹದಾರಿ ಕಲ್ಪಿಸಿದೆ. ಮಹಿಳಾ ಮೀಸಲಾತಿ ಕಾಂಗ್ರೆಸ್‌ನ ಪೊಳ್ಳು ಭರವಸೆಯಾಗಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದನ್ನು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ತರಲಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಸವಿತಾ ವಾಸು ಮಾತನಾಡಿ, ಕೇಂದ್ರದಲ್ಲಿ ನಾರಿಶಕ್ತಿ ವಂದನಾ ಅಽನಿಯಮ ಜಾರಿ ಮಹಿಳೆಯರ ರಾಜಕೀಯ ಪಯಣಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ಅನೇಕ ವರ್ಷಗಳಿಂದ ಮಹಿಳೆಯರಿಗೆ ಶಾಸನಸಭೆ, ಲೋಕಸಭೆಯಲ್ಲಿ ಶೇ. ೩೩ ಮೀಸಲಾತಿ ನೀಡಲು ಹೋರಾಟ ನಡೆಸಿಕೊಂಡು ಬರಲಾಗಿತ್ತು. ಆದರೆ ಕಾಂಗ್ರೆಸ್ ಮೀಸಲಾತಿ ವಿಷಯ ಬಂದಾಗ ಮಹಿಳೆಯರಿಂದ ಮತ ಪಡೆದು ಮೋಸ ಮಾಡುತ್ತಿತ್ತು. ಆದರೆ ಬಿಜೆಪಿ ಮಹಿಳಾ ಮೀಸಲಾತಿ ಜಾರಿಗೊಳಿಸಿ ಹೊಸ ಅಧ್ಯಾಯ ಸೃಷ್ಟಿಸಿದೆ ಎಂದು ಹೇಳಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಪ್ರಮುಖರಾದ ಪ್ರೇಮಾ ಕಿರಣ್ ಸಿಂಗ್, ಪುರುಷೋತ್ತಮ್, ಅರವಿಂದ ರಾಯ್ಕರ್, ಶ್ರೀನಿವಾಸ್ ಮೇಸ್ತಿç, ಮೈತ್ರಿ ಪಾಟೀಲ್, ಸುಧಾ ಉದಯ್, ಕವಿತಾ ಜಯಣ್ಣ, ಕೆ.ಸತೀಶ್, ಶಂಕರ ಅಳ್ವಿಕೋಡಿ, ಬಿ.ಎಚ್.ಲಿಂಗರಾಜ್, ಕೃಷ್ಣ ಶೇಟ್, ಪ್ರದೀಪ್ ಇತÀರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net