ಶಿಕ್ಷಣ ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು

CTD 15 NEWS LIBBB
Published on

ಚಿತ್ರದುರ್ಗ: ನಗರದ ಶ್ರೀ ಕೃಷ್ಣ ರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದಲ್ಲಿ ಮಂಗಳವಾರ ರಾಜಾರಾಮ್‌ಮೋಹನ್‌ರಾಯ್ ಅವರ 250ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಮಹಿಳಾ ಸಬಲೀಕರಣದ ಜಾಗೃತಿ ಕಾರ‌್ಯಕ್ರಮ ಏರ್ಪಡಿಸಲಾಗಿತ್ತು.

ಕಾರ‌್ಯಕ್ರಮ ಉದ್ದೇಶಿಸಿ ಮಾತ ನಾಡಿದ ಜಿಪಂ ಸಿಇಒ ಎಂ.ಎಸ್.ದಿವಾಕರ್,ಮಹಿಳಾ ಸಬಲೀಕರಣದ ಮೊದಲ ಮೆಟ್ಟಿಲು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಾಗಿದೆ. ಮಹಿಳೆಯರನ್ನು ಗೌರವಿಸುವುದರೊಂದಿಗೆ,ಶಿಕ್ಷಣ ಕೊಟ್ಟಾಗ ಮಹಿಳಾ ಸಬಲೀಕರಣಕ್ಕೆ ನಾಂದಿಯಾಗ ಬೇಕೆಂದರು.

ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ,ರಾಜ್ಯಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆ.ಮಂಜುನಾಥ್,ಮುಖ್ಯಗ್ರಂಥಾಲ ಯಾಧಿಕಾರಿಗಳಾದ ಪಿ.ಆರ್.ತಿಪ್ಪೇಸ್ವಾಮಿ,ಕೊಳ್ಳಿ ಬಸವರಾಜ್,ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ಸಿ.ಬಿ.ಶೈಲಾ,ಅವರು ಮಹಿಳಾ ಸಬಲೀಕರಣದ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಸಬಲೀಕರಣದ ಜಾಗೃತಿ ಜಾಥಾವನ್ನು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಉದ್ಘಾಟಿಸಿದರು.

ಪ್ರಬಂಧ ಸ್ಪರ್ಧೆ ವಿಜೇತರು

ವಾರ್ಷಿಕೋತ್ಸವ ನೆನಪಿಗಾಗಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ವಾಸವಿ ಪ್ರೌಢಶಾಲೆಯ ವಿದ್ಯಾರ್ಥಿಗಳಾ ದ ಆರ್.ಕೆ.ಶಿಲ್ಪಶ್ರೀ(ಪ್ರ),ಜೆ.ಸೂರಜ್(ದ್ವೀ),ಆರ್.ಚಿನ್ಮಯಿ (ತೃ)ಹಾಗೂ ಕೆ.ಕೆ.ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ ಬಿ.ಚಂದು ಸಮಾಧಾನಕರ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net