ಸಂಜೀವಿನಿ ಒಕ್ಕೂಟದಿಂದ ಮಹಿಳೆಯರು ಸಬಲ

bhr okkuta
ಬಾಳೆಹೊನ್ನೂರಿನಲ್ಲಿ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಒಕ್ಕೂಟದ ಅಧ್ಯಕ್ಷೆ ಸವಿತಾ ಅನೀಶ್ ಉದ್ಘಾಟಿಸಿದರು. ಸದಾಶಿವ ಆಚಾರ್ಯ, ರಾಜೇಂದ್ರ, ಸುಬ್ರಹ್ಮಣ್ಯ, ಕಾಶಪ್ಪ ಇತರರಿದ್ದರು.
Published on

ಬಾಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ಸಂಜೀವಿನಿ ಒಕ್ಕೂಟಗಳ ಸ್ಥಾಪನೆಯಿಂದಾಗಿ ಮಹಿಳೆಯರು ಸಬಲಗೊಂಡಿದ್ದಾರೆ ಎಂದು ಎನ್‌ಆರ್‌ಎಲ್‌ಎಂ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಂದ್ರ ಹೇಳಿದರು.

ಕೌಶಲಾಭಿವೃದ್ಧಿ ಉದ್ಯಮಶೀಲತಾ ಇಲಾಖೆ ಸಹಯೋಗದಲ್ಲಿ ಸಂಜೀವಿನಿ ಒಕ್ಕೂಟ ಶುಕ್ರವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 226 ಸಂಜೀವಿನಿ ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಮೂಡಿಗೆರೆ, ಕಡೂರು, ತರೀಕೆರೆ ತಾಲೂಕುಗಳಲ್ಲಿ ಪ್ರೊಡ್ಯೂಸರ್ ಕಂಪೆನಿಗಳನ್ನು ಸಹ ಸಂಜೀವಿನಿ ಒಕ್ಕೂಟ ತೆರೆದಿದೆ ಎಂದರು.
ಎನ್‌ಆರ್‌ಎಲ್‌ಎಂ ತಾಲೂಕು ವ್ಯವಸ್ಥಾಪಕ ಸುಬ್ರಹ್ಮಣ್ಯ ಮಾತನಾಡಿ, ಸಂಜೀವಿನಿ ಒಕ್ಕೂಟ ಆರಂಭಗೊಂಡು ಮೂರು ವರ್ಷ ಕಳೆದಿದ್ದು, ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಪಂ ಮಟ್ಟದಲ್ಲಿ ಕಾರ್ಯರೂಪಕ್ಕೆ ತರಲಾಗುತ್ತಿದೆ. ಗ್ರಾಮ, ವಾರ್ಡ್ ಮಟ್ಟದಲ್ಲಿ ಒಕ್ಕೂಟ ರಚನೆಯಾಗಿ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಣಿಯಾಗಿ ನೇರವಾಗಿ ಸರ್ಕಾರದಿಂದ ಅನುದಾನವನ್ನು ಜಿಪಂ ಮೂಲಕ ಪಡೆಯುತ್ತವೆ. ಸಂಜೀವಿನಿ ಒಕ್ಕೂಟದಲ್ಲಿ ಹಲವು ಕ್ರಿಯಾ ಯೋಜನೆಗಳಿದ್ದು, ಅವುಗಳನ್ನು ಮಹಾಸಭೆಯಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಪಿಡಿಒ ಕಾಶಪ್ಪ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸವಿತಾ ಅನೀಶ್, ಪ್ರಮುಖರಾದ ರೋಹಿಣಿ, ಮಾಲತಿ, ಚಂದ್ರಮ್ಮ, ಹೂವಮ್ಮ, ಸರಿತಾ, ಸಿಸಿಲಿಯಾ, ಜಯಶ್ರೀ, ರಮಾಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net