

ಗದಗ: ಮಹಿಳಾ ಸ್ವಸಹಾಯ ಸಂಘಗಳ ಸದಸ್ಯನಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಹೊಲಿಗೆ ತರಬೇತಿ ಕಾರ್ಯಾಗಾರವು ಇತ್ತಿಚೆಗೆ ಗದುಗಿನ ರಾಯಚೂಟೇಶ್ವರ ದೇವಸ್ಥಾನದ ಆವರಣದಲ್ಲಿ ರಿಲಯನ್ಸ್ ಫೌಂಡೇಶನ್ ಹಾಗೂ ಔಟ್ ರೀಚ್ ಸಂಸ್ಥೆಗಳ ಸಹಯೋಗದಲ್ಲಿ ಎರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಜಯಶ್ರೀ ಹಿರೇಮಠ ತರಬೇತಿ ನೀಡಿದರು. ತರಬೇತಿಯಲ್ಲಿ ಬ್ಲೌಸ್ ಸಿದ್ದಪಡಿಸುವಲ್ಲಿ, ಅದರ ಡಿಸೈನ್‌ಗಳ ಕುರಿತು, ಸಿಂಗಲ್ ಕಟ್, ಮತ್ತಿತರ ಕಟಿಂಗ್ ಹಾಗೂ ಬ್ಲೌಸ್ ಸಿದ್ದಪಡಿಸುವಲ್ಲಿ ಸರಳ ಕೌಶಲ್ಯಗಳನ್ನು ತಿಳಿಸಿಕೊಟ್ಟರು.
ಮಹಿಳೆಯರು ಅದರಲ್ಲೂ ವಿಶೇಷವಾಗಿ ನಿರುದ್ಯೋಗ ಯುವತಿಯರು ಕಂಪ್ಯೂಟರ್, ಟೇಲರಿಂಗ್, ಬ್ಯೂಟಿಪಾರ್ಲರ್ ನಂತಹ ಸ್ವಯಂ ಉದ್ಯೋಗಗಳನ್ನು ಕೈಗೊಂಡು ಆರ್ಥಿಕವಾಗಿ ಮುನ್ನಡೆ ಸಾಧಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕೆಂದರು.
ಔಟ್ ರೀಚ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಲೋಹಿತಕುಮಾರ ಕಾಸಾರ ಮಾತನಾಡಿ ಆಧುನಿಕ ಇಂದಿನ ದಿನಗಳಲ್ಲಿ ಟೇಲರಿಂಗ್ ಕ್ಷೇತ್ರದಲ್ಲಿ ಫ್ಯಾಶನ್, ಎಂಬ್ರಾಯಿಡರಿ, ಡಿಸೈನಿಂಗ್ ಹೆಚ್ಚು ಮಾರುಕಟ್ಟೆಯನ್ನು ಒದಗಿಸುವಂತದ್ದಾಗಿದೆ. ಮಹಿಳೆಯರು ಟೇಲರಿಂಗ್‌ನAತಹ ಸ್ವಯಂ ಉದ್ಯೋಗವನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ರಿಲಯನ್ಸ್ ಫೌಂಡೇಶನ್ ಹಾಗೂ ಔಟ್ ರೀಚ್ ಸಂಸ್ಥೆಯಿAದ ಹೊಲಿಗೆ ತರಬೇತಿ ಪಡೆದ ತಿಮ್ಮಾಪೂರ ಹಾಗೂ ಕಣಗಿನಹಾಳ ಗ್ರಾಮಗಳ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯನಿಯರಿಗೆ ಹೊಲಿಗೆ ಕಿಟ್‌ಗಳನ್ನು ವಿತರಿಸಲಾಯಿತು.
ತರಬೇತಿ ಪಡೆದ ನಿರ್ಮಲಾ ಹಳ್ಳದ, ಶಾರದಾ ತಿರ್ಲಾಪೂರ, ರತ್ನವ್ವ ತಳವಾರ, ಪದ್ಮಾವತಿ, ಅಂದವ್ವ ಓಲೇಕಾರ, ಸುವರ್ಣ ಓಲೇಕಾರ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.