ಆಕಸ್ಮಿಕವಾಗಿ ಕೀಟನಾಶಕ ಹೊಟ್ಟೆ ಸೇರಿ ಮಹಿಳೆ ಸಾವು

ಕಲಬುರಗಿ ತಾಲೂಕಿನ ಕವಲಗಾ (ಕೆ) ಗ್ರಾಮದಲ್ಲಿ ಹತ್ತಿಗೆ ಸಿಂಪಡಿಸಿ ತಂದು  ಇರಿಸಿದ್ದ ಕೀಟನಾಶಕ ಆಕಸ್ಮಿಕವಾಗಿ ಮಹಿಳೆಯ ಹೊಟ್ಟೆಯೊಳಗೆ ಹೋಗಿ ಮೃತಪಟ್ಟ ಘಟನೆ ನಡೆದಿದೆ
crime-logo
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ತಾಲೂಕಿನ ಕವಲಗಾ (ಕೆ) ಗ್ರಾಮದಲ್ಲಿ ಹತ್ತಿಗೆ ಸಿಂಪಡಿಸಿ ತಂದು  ಇರಿಸಿದ್ದ ಕೀಟನಾಶಕ ಆಕಸ್ಮಿಕವಾಗಿ ಮಹಿಳೆಯ ಹೊಟ್ಟೆಯೊಳಗೆ ಹೋಗಿ ಮೃತಪಟ್ಟ ಘಟನೆ ನಡೆದಿದೆ.
ಬಸಮ್ಮ ಎಂಬುವರೇ ಮೃತಪಟ್ಟವರು.
ಹತ್ತಿಗೆ ಕೀಟನಾಶಕ ಸಿಂಪಡಿಸಲು ಬಳಸಿದ ಮಗ್ ಹಾಗೂ ಕೀಟನಾಶಕ ಮನೆಯಲ್ಲಿನ ಬ್ಯಾರಲ್ ಬಳಿಯಲ್ಲಿ ಇಡಲಾಗಿತ್ತು. ಅವರು ಬೆಳಗ್ಗೆ ಎದ್ದು ಮುಖ ತೊಳೆಯಲು ಅದೇ ಮಗ್‌ದಿಂದ ನೀರು ಬಳಸಿದ್ದರಿಂದ ವಿಷ ಹೊಟ್ಟೆಯೊಳಗೆ ಹೋಗಿದೆ. ಅಸ್ವಸ್ಥಗೊಂಡ ಅವರನ್ನು ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಕೊನೆಯುಸಿರೆಳೆದಿದ್ದಾರೆ. ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net