ಮಣೂರಲ್ಲಿ ಮಹಿಳೆ ಬೆಂಕಿಗಾಹುತಿ

crime scene tape of  mysterious case in cenematic tone with copy space
crime scene tape focus on word 'crime' in cenematic dark tone with copy space
Published on

ಕೋಟ: ಮಣೂರು ಜಟ್ಟಿಗೇಶ್ವರ ದೇವಸ್ಥಾನ ಎದುರುಗಡೆ ನಿವಾಸಿ ಬಾಗಿ ಎಂಬುವರು (68) ಶನಿವಾರ ಬೆಂಕಿ ಅನಾಹುತದಿಂದ ಸಾವಿಗೀಡಾಗಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆ ವಠಾರದಲ್ಲಿ ಕಸ ಕಡ್ಡಿ ಒಗ್ಗೂಡಿಸಿ ಬೆಂಕಿ ಹಾಕುವ ಸಂದರ್ಭದಲ್ಲಿ ಸೀರೆಗೆ ಬೆಂಕಿ ತಾಗಿಕೊಂಡಿದ್ದು, ತಲೆ ಸುತ್ತಿದಂತಾಗಿ ಆಕೆಯೇ ಬೆಂಕಿಗೆ ಬಿದ್ದು ಸುಟ್ಟ ಗಾಯಗಳಾಗಿತ್ತು. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಸ್ಥಳೀಯರು ಸೇರಿ ಮಣಿಪಾಲದ ಖಾಸಗಿ ಆಸ್ಪತ್ರೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾಯಂಕಾಲ ಮೃತಪಟ್ಟಿದ್ದಾರೆ. ಅವರು ಅವಿವಾಹಿತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net