ಮಹಿಳೆ ಮುಖ್ಯವಾಹಿನಿಗೆ ಬರಲಿ: ತಾರಾಮತಿ ವಾಶೆಪ್ಪನವರ

27 Jaggu 8
ವಡಗಾವಿಯ ಬನಶಂಕರಿ ದೇವಸ್ಥಾನದಲ್ಲಿ ಈಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ತಾರಾಮತಿ ವಾಶೆಪ್ಪನವರನ್ನು ಸನ್ಮಾನಿಸಲಾಯಿತು. ಲಲಿತಾ ಢಗೆ, ಹರ್ಷಾ ಲಟ್ಟೆರ, ರಶ್ಮಿ ಕಾಮಕರ, ದೀಪಾ ಟೋಪಗಿ, ಲೋಹಿತ ಮೋರಕರ ಇತರರಿದ್ದರು.
Published on

ಬೆಳಗಾವಿ: ಭಾರತೀಯ ಮಹಿಳೆ ವಿಶ್ವಕ್ಕೇ ಮಾದರಿ. ಸಾವಿರಾರು ನೋವುಂಡು ಬೇರೆಯವರಿಗೆ ಒಳಿತು ಬಯಸುವ ಮಹಿಳೆ ಮುಖ್ಯವಾಹಿನಿಗೆ ಬರಬೇಕು ಎಂದು ರಾಜ್ಯ ನೇಕಾರ ಮಹಿಳಾ ಒಕ್ಕೂಟದ ಉಪಾಧ್ಯೆ ತಾರಾಮತಿ ವಾಶೆಪ್ಪನವರ ಹೇಳಿದರು.

ಇಲ್ಲಿನ ವಡಗಾವಿಯ ಬನಶಂಕರಿ ದೇವಸ್ಥಾನದಲ್ಲಿ ಈಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಹಿಳಾ ನೇಕಾರ ಒಕ್ಕೂಟದ ಅಧ್ಯಕ್ಷೆ ಲಲಿತಾ ಢಗೆ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆ ಪಾತ್ರ ಪ್ರಮುಖವಾಗಿದೆ ಎಂದರು.

ಜಿಲ್ಲಾ ನೇಕಾರ ಒಕ್ಕೂಟ ಮಹಿಳಾ ಟಕದ ಗೌರವಾಧ್ಯಕ್ಷೆ ಹರ್ಷಾ ಲಟ್ಟೆರ ಮಾತನಾಡಿ, ಪೌರಾಣಿಕ ಕಾಲದಿಂದಲೂ ಮಹಿಳೆ ತುಳಿತಕೊಳಪಟ್ಟಿರುವುದನ್ನು ಅಹಲ್ಯ, ಸೀತೆ, ಮಂಡೋದರಿ ಸೇರಿ ಹಲವರ ಜೀವನಗಾಥೆಯಿಂದ ತಿಳಿಯುತ್ತೇವೆ. ಮಹಿಳೆಯರು ಹಕ್ಕೊತ್ತಾಯ ಮಾಡಿ ಪುರುಷರಿಗೆ ಸಾಟಿಯಾಗಿ ನಿಂತಿದ್ದಾರೆ ಎಂದರು.

ಒಕ್ಕೂಟದ ಪದಾಧಿಕಾರಿ ಶಕುಂತಲಾ ಅಮಾಸಿ, ಸುರೇಖಾ ವನಹಳ್ಳಿ, ಮಹಾನಗರ ಪಾಲಿಕೆ ಸದಸ್ಯ ರಶ್ಮಿ ಕಾಮಕರ, ದೀಪಾ ಟೋಪಗಿ, ನೇಕಾರ ಒಕ್ಕೂಟದ ಮುಖಂಡ ಸೊಂಟಕ್ಕೆ, ಲೋಹಿತ ಮೋರಕರ, ಗ್ಯಾನೂಬಾ ವಾಗೂಕರ, ಅನಂದಕುಮಾರ ಲಟ್ಟೆ, ಮಹಿಳಾ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ರಾಜೇಶ್ವರಿ ಲೋನಿ ಪ್ರಾರ್ಥಿಸಿದರು. ರೂಪಾ ಪಾಟೀಲರು ಸ್ವಾಗತಿಸಿದರು. ಸಹನಾ ಬೇಕವಾಡ ನಿರೂಪಿಸಿ, ವಂದಿಸಿದರು. ಮಹಿಳೆಯರಿಂದ ಸಾಂಸತಿಕ ಕಾರ್ಯಕ್ರಮ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net