ಶರಣರ ವಚನ ಗ್ರಂಥಗಳ ಪಲ್ಲಕ್ಕಿ ಹೊತ್ತ ಮಹಿಳೆಯರು

5MDG1 PALLAKKI
Published on

ಮುಂಡರಗಿ: ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಆಷಾಢ ಮಾಸದ ನಿಮಿತ್ತ 15 ದಿನಗಳ ಕಾಲ ಹಮ್ಮಿಕೊಂಡಿದ್ದ ಅನುಭಾವಿಗಳ ಅನುಭಾವ ದರ್ಶನ ಪ್ರವಚನದ ಮಂಗಲೋತ್ಸವ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಬಸವಣ್ಣನವರ, ಎಡೆಯೂರ ಶ್ರೀ ಸಿದ್ಧಲಿಂಗ ಶಿವಯೋಗಿಗಳ ಭಾವಚಿತ್ರ ಹಾಗೂ ಶರಣರ ವಚನ ಗ್ರಂಥಗಳ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ನಡೆಯಿತು.

ಡೊಳ್ಳು, ಸಮ್ಮಾಳ ಮೊದಲಾದ ಮಂಗಳ ವಾಧ್ಯಮೇಳಗಳೊಂದಿಗೆ ಶ್ರೀಮಠದಿಂದ ಹೊರಟ ಮೆರವಣಿಗೆಯು ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಮತ್ತೆ ಶ್ರೀಮಠಕ್ಕೆ ಆಗಮಿಸಿತು. ಮಹಿಳೆಯರು ಪಲ್ಲಕ್ಕಿ ಹೊತ್ತು ಸಾಗಿದ್ದು ಗಮನ ಸೆಳೆಯಿತು.

ಶ್ರೀಮಠದ ಪೀಠಾಧಿಪತಿ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮಹಾತ್ಮರು ಸಮಾಜದಲ್ಲಿ ನಡೆ ನುಡಿ ಕಲಿಸಿದವರು. ಸತ್ಯದ ದರ್ಶನದ ಜೊತೆಗೆ ಮಾನವ ಏಳಿಗೆಗೆ ಮಾರ್ಗದರ್ಶನ ಮಾಡಿದವರು. ಶ್ರೀಮಠದಲ್ಲಿ ಹೆಣ್ಣು, ಗಂಡು ಎನ್ನುವ ಬೇಧ-ಭಾವವಿಲ್ಲ. ಬಸವಾದಿ ಪ್ರಮಥರ ತತ್ವಸಿದ್ಧಾಂತದ ಪ್ರಕಾರ ತೋಂಟದಾರ್ಯ ಮಠದಿಂದ ಮಹಿಳೆಯರಿಗೂ ಪಲ್ಲಕ್ಕಿ ಹೊರಲು ಅವಕಾಶ ಮಾಡಿಕೊಡಲಾಗಿದೆ. ಉತ್ತಮ ಮಳೆ, ಬೆಳೆ ಬಂದು ರೈತರು ಸಮೃದ್ಧಿಯಾಗಿರಬೇಕು. ರೈತರು ಚೆನ್ನಾಗಿದ್ದಾಗ ಮಾತ್ರ ನಾವೆಲ್ಲರೂ ಚೆನ್ನಾಗಿರಲು ಸಾಧ್ಯ ಎಂದರು.

ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಕಾರ್ಯದರ್ಶಿ ಅಡಿವೆಪ್ಪ ಚಲವಾದಿ, ಖಜಾಂಚಿ ಶಿವಕುಮಾರ ಬೆಟಗೇರಿ, ಸಹ ಖಜಾಂಚಿ ವಿಶ್ವನಾಥ ಉಳ್ಳಾಗಡ್ಡಿ, ಸಹಕಾರ್ಯದರ್ಶಿ ವೀರೇಂದ್ರ ಅಂಗಡಿ, ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್. ವಿರೂಪಾಕ್ಷಗೌಡ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಪವನ ಚೋಪ್ರಾ, ಅಶೋಕ ಹುಬ್ಬಳ್ಳಿ, ಪಾಲಾಕ್ಷಿ ಗಣದಿನ್ನಿ, ದೇವು ಹಡಪದ, ದೇವಪ್ಪ ರಾಮೇನಹಳ್ಳಿ, ಸದಾಶಿವಯ್ಯ ಕಬ್ಬೂರಮಠ, ಗಿರೀಶಗೌಡ ಪಾಟೀಲ, ವಿ.ಎಸ್. ಗಟ್ಟಿ, ಶರಣಪ್ಪ ಕುಬಸದ, ಮಂಗಳಾ ಶೀರಿ, ಮಂಗಳಾ ಕರ್ಜಗಿ, ಸುಕನ್ಯಾ ಕಬ್ಬೂರಮಠ, ನೀಲಮ್ಮ ಗಿಂಡಿಮಠ, ಶಿವಗಂಗಾ ನವಲಗುಂದ, ಶಾಂತಾ ಕುಬಸದ, ಈರಮ್ಮ ಹಾಲಗಿ, ಈರಮ್ಮ ಮಾಲಿಪಾಟೀಲ, ಅನ್ನಕ್ಕ ಸಜ್ಜನರ, ಮಂಗಳಾ ಅಮರಗೋಳಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net