ಮಹಿಳೆಯಿಂದ ಸಮಾಜ ಬದಲಾವಣೆ ಸಾಧ್ಯ

Women can change society
ಗುಳೇದಗುಡ್ಡ ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನದ ಕಾರ್ಯಕ್ರಮವನ್ನು ಬಸಮ್ಮ ನರಸಾಪೂರ ಉದ್ಘಾಟಿಸಿದರು. ಡಾ.ಎಚ್.ಎಸ್. ಘಂಟಿ, ಗುರುಸಿದ್ಧ ಪಟ್ಟದಾರ್ಯ ಶ್ರೀಗಳು, ಸರಿತಾ ಚಂದನ್ನವರ, ಇಂದುಮತಿ ಬೋರಣ್ಣವರ, ಸಕ್ಕೂಭಾಯಿ ನೆಲ್ಲೂರ, ವಿದ್ಯಾ ಬಾಫ್ರಿ, ವಿಠ್ಠಲಸಾ ಬದಿ ಮತ್ತಿತರರಿದ್ದಾರೆ.
Published on

ಗುಳೇದಗುಡ್ಡ : ಹಿಂದಿನ ಕಾಲದಲ್ಲಿ ಸೀ ಸಬಲೆಯಲ್ಲ, ಅಬಲೆ ಎನ್ನುತ್ತಿದ್ದರು. ಆದರೆ, ಕಾಲ ಬದಲಾಗಿದ್ದು ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾಳೆ ಎಂದು ಪ್ರಾಚಾರ್ಯೆ ಬಸಮ್ಮ ನರಸಾಪೂರ ಹೇಳಿದರು.

ಪಟ್ಟಣದ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಪುರುಷನ ಬೆಳವಣಿಗೆಗೆ ಮಹಿಳೆ, ಮಹಿಳೆ ಅಭಿವೃದ್ಧಿಗೆ ಪುರುಷ ಬೆನ್ನೆಲುಬಾಗಿರುತ್ತಾರೆ. ಹೀಗಾಗಿ ಮಹಿಳೆಯಿಂದ ಸಮಾಜ ಬದಲಾವಣೆ ಸಾಧ್ಯ ಎಂದರು.

ಪ್ರಾಚಾರ್ಯ ಡಾ.ಎಚ್.ಎಸ್. ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರುಷ ಮತ್ತು ಮಹಿಳೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬಾಳಿದಾಗ ಬದುಕು ರಸಮಯವಾಗುತ್ತದೆ ಎಂದರು.

ಗುರುಸಿದ್ಧೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಿಳೆ ಪ್ರಾಚೀನ ಕಾಲದಿಂದಲೂ ಪೂಜ್ಯನೀಯವಾದ ಸ್ಥಾನ ಪಡೆದಿದ್ದಾಳೆ. ಕುಟುಂಬ ಹಾಗೂ ಸಮಾಜದ ಬದಲಾವಣೆ ಮಹಿಳೆಯಿಂದ ಮಾತ್ರ ಸಾಧ್ಯ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಸರಿತಾ ಚಂದನ್ನವರ, ಇಂದುಮತಿ ಬೋರಣ್ಣವರ, ಸಕ್ಕೂಭಾಯಿ ನೆಲ್ಲೂರ, ವಿದ್ಯಾ ಬಾಫ್ರಿವಿಠ್ಠಲಸಾ ಬದಿ, ರವಿಕುಮಾರ ವಂದಾಲ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net