

ನೆಲಮಂಗಲ : ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ. ಮನೆಗೆಲಸಕ್ಕಷ್ಟೇ ಸೀಮಿತವಾಗಿದ್ದ ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲೆ ಎಲಿಜಬೆತ್ ಚೆರಿಯನ್ ತಿಳಿಸಿದರು. ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಹಾಗೂ 8 ವಿವಿಧ ರೋಟರಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಟೈಲರಿಂಗ್, ಬ್ಯೂಟಿ ಪಾರ್ಲರ್, ಸೀರೆಗೆ ಕ್ರೋಷ ಮತ್ತು ಕುಚ್ಚು ಹಾಕುವ ತರಬೇತಿ ಹಾಗೂ ಪ್ರಮಾಣ ಪತ್ರ, ಹೊಲಿಗೆ ಯಂತ್ರ ಸೇರಿ ವಿವಿಧ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶ ಅಭಿವೃದ್ಧಿ ಹೊಂದಲು ಮಹಿಳೆಯರು, ವಿದ್ಯಾವಂತರು ಹಾಗೂ ಪ್ರಜ್ಞಾವಂತೆ ಜತೆಗೆ ಸ್ವಾವಲಂಬಿಯಾಗಿ ಆರ್ಥಿಕವಾಗಿ ಸಬಲರಾಗಬೇಕಿದೆ. ರೋಟರಿ ಸಂಸ್ಥೆ ಸದಾ ಮಹಿಳೆಯರನ್ನು ಸ್ವಾವಲಂಬಿಯಾಗಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಜತೆಗೆ ಇತ್ತೀಚೆಗೆ ಗ್ರಾಮೀಣ ಮಹಿಳೆಯರ ಜೀವನ ಸುಧಾರಣೆ ಮಟ್ಟ ಹೆಚ್ಚಿಸಿಕೊಳ್ಳಲು ಸ್ವ&ಉದ್ಯೋಗ ಮತ್ತು ಉದ್ಯಮಗಳ ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳ ಸಹಕಾರದೊಂದಿಗೆ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸೇರಿ ಕೌಶಲವೃತ್ತಿ ತರಬೇತಿ ನೀಡಲಾಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಂದು ಆರ್ಥಿಕ ಸುಧಾರಣೆ ಕಾಣುತ್ತಿದ್ದಾರೆ ಎಂದರು. ನೆಲಮಂಗಲ ರೋಟರಿ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಗಂಗರಾಜು, ಮಾಜಿ ಅಧ್ಯಕ್ಷ ಎಂ.ಎನ್.ಹರೀಶ್ಕುಮಾರ್, ಟಿ.ನಾಗರಾಜು, ಎಚ್.ಜಿ.ರಾಜು, ವಿ.ಆರ್.ಸ್ವಾಮಿ, ಇನ್ನರ್ ವೀಲ್ ಅಧ್ಯೆ ಪೂರ್ಣಿಮಾ ಸುಗ್ಗರಾಜು, ಕಾರ್ಯದರ್ಶಿ ಮಂಜುಳಾ ಸಿದ್ದರಾಜು, ಮಾಜಿ ಅಧ್ಯೆ ಪ್ರೇಮಾ, ಕುಸುಮಾ, ಉಮಾ, ಸರ್ವಮಂಗಳಾ, ಕೋಮಲಾ ಇತರರು ಇದ್ದರು.
ನಶೆ ಮುಕ್ತ ಕರ್ನಾಟಕ : ನಶೆಮುಕ್ತ ಸಮಾಜದ ನಿಮಾರ್ಣ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ರಾಜ್ಯಾದ್ಯಂತ ನಗರ ಮುಕ್ತ ಕರ್ನಾಟಕ ಅಭಿಯಾನ ನಡೆಸಲಾಗುತ್ತಿದೆ ಎಂದು ರೋಟರಿ ಜಿಲ್ಲಾ ಪ್ರಾಂತಪಾಲ ಎಲಿಜಬೆತ್ ಚೆರಿಯನ್ ತಿಳಿಸಿದರು.
ಹೊಲಿಗೆ ಯಂತ್ರ ವಿತರಣೆ : ಉಚಿತ ಟೈಲರಿಂಗ್ ತರಬೇತಿ ಪಡೆದ 46 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು. ಜತೆಗೆ ಬ್ಯೂಟಿ ಪಾರ್ಲರ್, ಸೀರೆಗೆ ಕ್ರೋಷ ಮತ್ತು ಕುಚ್ಚು ಹಾಕುವ ತರಬೇತಿ ಪಡೆದ ಮಹಿಳೆಯರಿಗೆ ಅನುಕೂಲವಾಗುವ ಕಿಟ್ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಸ್ವಉದ್ಯೋಗಗಳು ಆರ್ಥಿಕ ಮಟ್ಟ ಸುಧಾರಿಸುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿ ಪ್ರಗತಿಯತ್ತ ಸಾಗುತ್ತಿದ್ದಾರೆ. ರೋಟರಿಯಿಂದ ಹೊಲಿಗೆ ತರಬೇತಿ, ಬ್ಯೂಟಿಪಾರ್ಲರ್ ಕಲಿತ ಮಹಿಳೆಯರು ಉತ್ತಮ ಸಾಧನೆ ಮಾಡಿದ್ದಾರೆ. ಇದು ಮಾದರಿ ಬೆಳವಣಿಗೆ. > ಜಿ.ಆರ್.ನಾಗರಾಜು ಶಿ ರೋಟರಿ ಅಧ್ಯಕ್ಷ