ಡೈವೋರ್ಸ್ ಚಿಂತೆಯಲ್ಲಿ ಮಹಿಳೆ ಅತ್ಮಹತ್ಯೆ

images (2)
Published on

ಉಡುಪಿ: ಮಣಿಪಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಅಸಿಸ್ಟೆಂಟ್ ಮೆನೇಜರ್ ಅಗಿರುವ ಮಹಿಳೆಯೊಬ್ಬರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರ ನಾಗಪುರದ ಸೋನಾಲಿ (35) ಮೃತರು. ಇವರು 2 ವರ್ಷಗಳಿಂದ ಮಣಿಪಾಲ  ವಿಭುದಪ್ರಿಯ ನಗರದಲ್ಲಿ ವಾಸವಾಗಿದ್ದು,  2019 ರಲ್ಲಿ  ಮದುವೆಯಾಗಿ 2022ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಚೇದನವಾಗಿತ್ತು. ಆ ಬಳಿಕ ಆಕೆ ಸ್ವಲ್ಪ ಖಿನ್ನತೆಗೆ ಒಳಗಾಗಿದ್ದರು. ಇವರ ತಂದೆ ತಾಯಿ ಬಂದು ಹೋಗುತ್ತಿದ್ದು, ಇತ್ತೀಚೆಗೆ ಇವರ ತಾಯಿ  ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದು  ಅವರ ಕಾಲಿಗೆ ಪೆಟ್ಟಾಗಿರುತ್ತದೆ. ಅವರನ್ನು ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಗುರುವಾರ ಕರೆ ಸ್ವೀಕರಿಸದೇ ಇರುವುದರಿಂದ ಅತಂಕಗೊಂಡ ತಂದೆ ಆಸ್ಪತ್ರೆಯಿಂದ ಮನೆಗೆ ಬಂದು ನೋಡಿದಾಗ ಮಲಗುವ ಕೋಣೆಯಲ್ಲಿ ಫ್ಯಾನಿಗೆ ಚೂಡಿದಾರದ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. .  ಮದುವೆಯಾಗಿ ಡೈವೋರ್ಸ್ ಆಗಿದ್ದು, ತಾಯಿ ಆರೋಗ್ಯ ಸರಿ ಇಲ್ಲದೇ ಇದ್ದುದರಿಂದ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾಗಿ ತಂದೆ ದೂರಿನಲ್ಲಿ ತಿಳಿಸಿದ್ದಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net