ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿ

nltd 16-1
ನಾಲತವಾಡ ಪಟ್ಟಣದ ರತ್ನಸಂಗಮ ಕಲ್ಯಾಣಮಂಟಪದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.ಶಿಕ್ಷಕಿ ನಿರ್ಮಲಾ ಗದ್ದನಕೇರಿ, ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ಲ, ಮಲ್ಲಮ್ಮ ಪಾಟೀಲ, ಶಾರದಾ ಅಂಗಡಿ, ವೈದ್ಯೆ ಡಾ. ಗೀತಾ ಡಿಗ್ಗಿ ಇತರರಿದ್ದರು.
Published on

ನಾಲತವಾಡ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಾಗಿಲ್ಲ, ರಾಜಕೀಯ, ಕ್ರೀಡೆ, ಅಂತರಿಕ್ಷ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಛಾಪು ಮೂಡಿಸುತ್ತಿದ್ದಾರೆ ಎಂದು ಶ್ರೀ ವೀರೇಶ್ವರ ಪ್ರೌಢಶಾಲೆ ಶಿಕ್ಷಕಿ ನಿರ್ಮಲಾ ಗದ್ದನಕೇರಿ ಹೇಳಿದರು.

ಇತ್ತೀಚೆಗೆ ನಾಲತವಾಡದ ರತ್ನಸಂಗಮ ಕಲ್ಯಾಣಮಂಟಪದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಸ್ಥಳೀಯ ಮಹಿಳಾ ಸ್ವಸಹಾಯ ಸಂಘ ಹಾಗೂ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮಹಿಳೆಯರು ಈಗಾಗಲೇ ಶೇ.70 ರಷ್ಟು ವಿವಿಧ ಕ್ಷೇತ್ರಗಳಲ್ಲಿ ಸಮಾನತೆ ಪಡೆದುಕೊಂಡಿದ್ದಾರೆ. ಬಾಕಿ ಉಳಿದ ಕ್ಷೇತ್ರಗಳಲ್ಲಿಯೂ ತಮ್ಮ ಕಾರ್ಯ ವ್ಯಾಪ್ತಿಯನ್ನು ಚಾಣಾಕ್ಷತನದಿಂದ ಸಮಾನತೆ ಹೊಂದಲು ಮುಂದಾಗಬೇಕು ಎಂದರು.

ಪಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಇಲಕಲ್ಲ, ಮಲ್ಲಮ್ಮ ಪಾಟೀಲ, ಶಾರದಾ ಅಂಗಡಿ, ವೈದ್ಯೆ ಡಾ. ಗೀತಾ ಡಿಗ್ಗಿ, ಸಿದ್ದಮ್ಮ ಸ್ಥಾವರಮಠ, ಗಂಗಮ್ಮ ಚೌಧರಿ, ನಿರ್ಮಲಾ ಗದ್ದನಕೇರಿ, ವಿಜಯಲಕ್ಷ್ಮೀ ಹಾವರಗಿ, ಮಲ್ಲಮ್ಮ ಮುದ್ನೂರ, ಸಂಗಣ್ಣ ಹಾವರಗಿ, ಸಿದ್ದಣ್ಣ ಕುರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net