ಎಲ್ಲ ಕ್ಷೇತ್ರಗಳಲ್ಲೂ ವನಿತೆಯರು ಮುಂದು

18 LXR 2
Published on

ಲಕ್ಷ್ಮೇಶ್ವರ: ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಹೆಜ್ಜೆ ಮೂಡಿಸುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಲ್ಲದು ಎಂಬುದಕ್ಕೆ ಇಂದಿನ ಮಹಿಳೆಯರು ಸಾಕ್ಷಿಯಾಗಿದ್ದಾರೆ ಎಂದು ಡಾ.ರಂಜಿತಾ ಎನ್. ಮಲ್ಲಾಡದ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಹಿಳೆ ತನ್ನ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಅದಕ್ಕೆ ಪತಿಯ ಸಹಕಾರ ಬಹಳ ಮುಖ್ಯ. ಇಂದು ಸಾಕಷ್ಟು ಮಹಿಳೆಯರು ಉನ್ನತ ಸಾಧನೆ ಮಾಡಿದ್ದಾರೆ ಎಂದರೆ ಅದರ ಹಿಂದೆ ಅವರ ಪತಿಯ ಸಹಾಯ ಇದ್ದೇ ಇರುತ್ತದೆ ಎಂದರು.

ಇಂದುಮತಿ ಎಸ್. ಪಿಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅರುಂಧತಿ ಎಸ್. ಬಳಿಗಾರ ಉದ್ಘಾಟಿಸಿದರು. ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಾದ ಲಲಿತಕ್ಕ ಕೆರಿಮನಿ ಅವರನ್ನು ಸನ್ಮಾನಿಸಲಾಯಿತು.

ನಿರ್ಮಲಾ ಅರಳಿ, ಸರೋಜಕ್ಕ ಬನ್ನೂರ, ಶಾರದಾ ಬಟಗುರ್ಕಿ ಕಾಂಚನಾ ಹಸರೆಡ್ಡಿ, ಅರುಂಧತಿ ಬಿಂಕದಕಟ್ಟಿ, ಚಿತ್ರಾ ಹಣಗಿ, ಅಂಕಿತಾ ಅರಳಿ, ಅನ್ನಕ್ಕ ಯಾಳಗಿ, ಮಂಜುಳಾ ಓದುನವರ, ಕುಸುಮಾ ಮಲ್ಲಾಡದ, ಸುಲೋಚನ ಜವಾಯಿ, ರೂಪಾ ಕಳ್ಳಿಗುಡ್ಡ, ವಿಜಯಲಕ್ಷ್ಮೀ ಪಿಳ್ಳಿ, ಮಂಜುಳಾ ಪಿಳ್ಳಿ, ಪ್ರತಿಮಾ ಮಹಾಜನಶೆಟ್ಟರ, ಕವಿತಾ ಅರಳಹಳ್ಳಿ, ಪಾರ್ವತಿ ಕಳ್ಳಿಮಠ ಮತ್ತಿತರರು ಇದ್ದರು. ಎಚ್.ಡಿ. ನಿಂಗರೆಡ್ಡಿ ಸ್ವಾಗತಿಸಿದರು. ಡಿ.ಎಫ್. ಪಾಟೀಲ ನಿರೂಪಿಸಿದರು. ನೀಲಾ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net