ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ

18 ckm 3
ಚಿಕ್ಕಮಗಳೂರಿನ ಬನಶಂಕರಿ ಮಹಿಳಾ ಸಂಘದ ಕಚೇರಿಯಲ್ಲಿ ಸಂಘದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಸಂಘದ ಅಧ್ಯಕ್ಷೆ ಸುವರ್ಣಾಕೇಶವಮೂರ್ತಿ, ಉಪಾಧ್ಯಕ್ಷೆ ರಾಧಾ ರಾಜ್‌ಕುಮಾರ್, ಕಾರ್ಯದರ್ಶಿ ಧನಲಕ್ಷ್ಮೀ ಗೋಕುಲ್, ಖಜಾಂಚಿ ಶ್ಯಾಮಲಾರಾಜು ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಆಧುನಿಕ ಕಾಲದಲ್ಲಿ ಪುರುಷರಿಗಿಂತ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಒಂದು ಹೆಜ್ಜೆ ಮುಂದಿದ್ದಾಳೆ ಎಂದು ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಾಕೇಶವಮೂರ್ತಿ ತಿಳಿಸಿದರು.

ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಆಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಕಾನೂನು ಮಹಿಳೆಯರಿಗೆ ವಿಶಿಷ್ಟ ಗೌರವ, ಸ್ಥಾನಮಾನ ಮತ್ತು ಸಮಾನ ಹಕ್ಕನ್ನು ನೀಡಿದೆ. ಮಹಿಳೆಯರು ಇಂದು ತಂತ್ರಜ್ಞಾನದ ಬೆಳವಣಿಗೆ ಹಾಗೂ ಇನ್ನಿತರ ಯಾವುದೇ ಕ್ಷೇತ್ರದಲ್ಲಾದರು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಮಹಿಳೆ ಪುರುಷರಿಗಿಂತ ಹೆಚ್ಚು ಶಕ್ತಿವಂತಳು. ಇಡೀ ಕುಟುಂಬವನ್ನು ತಿದ್ದಿತೀಡಿ ದಾರಿಗೆ ತರುವ ಸಾಮರ್ಥ್ಯ ಮತ್ತು ಹೊಣೆಗಾರಿಕೆ ಉಳ್ಳುವರು. ಇಂತಹ ಮಹಿಳೆಯನ್ನು ನಾವೆಲ್ಲರೂ ಸದಾ ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಬನಶಂಕರಿ ಮಹಿಳಾ ಸಂಘದ ಉಪಾಧ್ಯಕ್ಷೆ ರಾಧಾ ರಾಜ್‌ಕುಮಾರ್, ಕಾರ್ಯದರ್ಶಿ ಧನಲಕ್ಷ್ಮೀ ಗೋಕುಲ್, ಖಜಾಂಚಿ ಶ್ಯಾಮಲಾರಾಜು, ನಿರ್ದೇಶಕರಾದ ಕಾವೇರಿ ಕಾಂತರಾಜ್, ಗೀತಾ ವೇಣುಗೋಪಾಲ್, ಪವಿತ್ರಾ, ನಿರ್ಮಲಾ, ಭಾಗ್ಯ ಮೋಹನ್, ನಿರ್ಮಲಾ ರವಿಕುಮಾರ್, ಹೇಮಾವತಿ, ಸುಧಾ, ಗೀತಾ, ರುಕ್ಮಿಣಿ, ನಾಗರತ್ನ, ಪದ್ಮಾವತಿ, ಉಮಾ ಪ್ರೇಮಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net