ಪ್ರೇಮಿಯೊಂದಿಗೆ ನೆಲೆಸಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Doddapete police station
ಶಿವಮೊಗ್ಗ ದೊಡ್ಡಪೇಟೆ ಠಾಣೆ
Published on

ಶಿವಮೊಗ್ಗ: ಪತಿಯಿಂದ ದೂರವಾಗಿ ಪ್ರೇಮಿಯೊಂದಿಗೆ ಮೈಸೂರಿನಿಂದ ಬಂದು ಶಿವಮೊಗ್ಗದಲ್ಲಿ ನೆಲೆಸಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರು ಮೂಲದ ಪುಷ್ಪಲತಾ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನಗರದ ಮಿಳ್ಳಘಟ್ಟದಲ್ಲಿ ಭರತ್ ಎಂಬಾತನೊಂದಿಗೆ ಪುಷ್ಪಲತಾ ವಾಸವಾಗಿದ್ದರು. ಗುರುವಾರ ಸಂಜೆ ಮಿಳ್ಳಘಟ್ಟದ 3ನೇ ತಿರುವಿನ ಬಾಡಿಗೆ ಮನೆಯಲ್ಲಿ ನೇಣುಬಿಗಿದುಕೊಂಡಿದ್ದಾರೆ.

ಪುಷ್ಪಲತಾ ಅವರು 14 ವರ್ಷದ ಹಿಂದೆ ಕೊಡುಗು ಜಿಲ್ಲೆಯ ಪಾಲಿಬೆಟ್ಟದ ಈಶ್ವರ್ ಎಂಬುವರನ್ನು ಮದುವೆಯಾಗಿದ್ದರು. ಬಳಿಕ ಮೈಸೂರಿಗೆ ಬಂದು ನೆಲೆಸಿದ್ದರು. ಪತಿ ವಿಪರೀಯ ಮದ್ಯ ಸೇವನೆ ಮಾಡುತ್ತಿದ್ದ ಕಾರಣ ಒಂದು ವರ್ಷದಿಂದ ಆತನಿಂದ ದೂರವಿದ್ದರು. ಈ ನಡುವೆ ಶಿವಮೊಗ್ಗದ ಭರತ್ ಎಂಬಾತನ ಪರಿಚಯವಾಗಿತ್ತು. ಕೆಲಸ ಹುಡುಕಿಕೊಂಡು ಶಿವಮೊಗ್ಗಕ್ಕೆ ಬಂದಿದ್ದ ಪುಷ್ಪಲತಾ ಮಿಳ್ಳಘಟ್ಟದ 3ನೇ ತಿರುವಿನಲ್ಲಿ ಭರತ್ ಜತೆಗೆ ವಾಸವಾಗಿದ್ದರು. ಈ ನಡುವೆ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಆದರೆ ಭರತ್ ಮದುವೆಗೆ ನಿರಾಕರಿಸಿದ್ದ ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಭರತ್ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net