ಹಾಗಲಗಂಚಿ ಚೈತ್ರಾ ಸಾವಿನ ಸಮಗ್ರ ತನಿಖೆಯಾಗಲಿ

web 1
Published on

ಶೃಂಗೇರಿ: ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಚೈತ್ರಾ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಹಾಗಲಗಂಚಿ ಮಹಿಳಾಮನೆ ಪದಾಧಿಕಾರಿಗಳು ತಹಸೀಲ್ದಾರ್ ಅಂಬುಜಾಗೆ ಮನವಿ ಸಲ್ಲಿಸಿದರು.

ಮಹಿಳಾ ಮನೆ ಪದಾಧಿಕಾರಿ ಭಾಗ್ಯಾ ಹಾಗಲಗಂಚಿ ಮಾತನಾಡಿ, ಚೈತ್ರಾ ಸಾವು ಅಸಹಜವಾಗಿದೆ. ಆಕೆ ಕುಟುಂಬಸ್ಥರ ದೌರ್ಜನ್ಯದಿಂದ ಮನನೊಂದು ಆಕೆ ಸಾವಿಗೆ ಶರಣಾಗಿದ್ದಾಳೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಾನೂನಿನ ಅರಿವಿನ ಕೊರತೆಯಿದೆ. ಕೌಟುಂಬಿಕ ಹಿಂಸೆಗೆ ಒಳಗಾದಾಗ ಯಾರನ್ನು ಸಂರ್ಪಸ ಬೇಕು ಎಂಬ ತಿಳಿವಳಿಕೆ ಮಹಿಳೆಯರಲ್ಲಿ ಇರುವುದಿಲ್ಲ. ಹಾಗಾಗಿ ಮಹಿಳೆಯರಿಗೆ ಕಾನೂನು ಅರಿವಿನ ಕಾರ್ಯಾಗಾರ ನಡೆಸಬೇಕು ಎಂದು ಮನವಿ ಮಾಡಿದರು.

ಪದಾಧಿಕಾರಿ ರಾಧಾ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಲೇ ಇರುತ್ತದೆ.ಆತ್ಮಸ್ಥೆರ್ಯ ಇರುವರು ಹೋರಾಟ ಮಾಡುತ್ತಾರೆ. ಒತ್ತಡಕ್ಕೆ ಒಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೌಟುಂಬಿಕ ದೌರ್ಜನ್ಯ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net