ಸಿಡಿಲು ಬಡಿದು ಮಹಿಳೆ ಸ್ಥಳದಲ್ಲಿಯೇ ಸಾವು

112.jpg
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಇರಗಂಪಲ್ಲಿಯಲ್ಲಿ  ಸಿಡಿಲು ಹೊಡೆದು  ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಗ್ರಾಮದ ರಾಜಮ್ಮ (75 ವರ್ಷ) ಮೃತರು. ಈಕೆಯ ಮೂವರು ಗಂಡು ಮಕ್ಕಳ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು ಮೂರನೇ ಮಗ ಗಾರೆ ಕೆಲಸದ ಮೇಸ್ತ್ರಿ ಚಲಪತಿ ಮನೆಯಲ್ಲಿ ರಾಜಮ್ಮ ವಾಸವಾಗಿದ್ದರು. ಸಂಜೆ ಇರಗಂಪಲ್ಲಿ ಗ್ರಾಮದಲ್ಲಿ ಮಳೆಯ ಜೊತೆಗೆ ಗುಡುಗು ಮತ್ತು ಮಿಂಚು ಆರ್ಭಟ ಜೋರಾಗಿದ್ದ ಸಂದರ್ಭದಲ್ಲಿ ಮನೆಯ ಮುಂಭಾಗ ವಸ್ತುಗಳನ್ನು ಮಳೆಗೆ ನೆನೆಯದಂತೆ ಎತ್ತಿ ಇಡುತ್ತಿದ್ದಾಗ ಸಿಡಿಲು ಬಡಿದಿದೆ. ಇದಕ್ಕೂ ಮೊದಲು ಮನೆಯ ಪಕ್ಕದ ತೆಂಗಿನ ಮರಕ್ಕೂ ಸಿಡಿಲು ಹೊಡೆದಿದೆ.  ತೀವ್ರ ಗಾಯಗೊಂಡಿದ್ದ ಮಹಿಳೆ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net