

Microfinance : ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಸ್ಮಶಾನದಲ್ಲಿ ಮೂರುದಿನ ಕಾಲ ಕಳೆದ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಸುಮಾರು ದಿನಗಳ ಹಿಂದೆ ವಾರ ವಾರ ಕಟ್ಟುವ ಕಂತಿನ ಮೂಲಕ ಸಂತ್ರಸ್ತೆ ವನಜಾಕ್ಷಿ ಅವರು ಮೈಕ್ರೊ ಫೈನಾನ್ಸ್ನಲ್ಲಿ ಸಾಲ ಪಡೆದಿದ್ದರು.
ಮನೆಯ ಅರ್ಥಿಕ ಪರಸ್ಥಿತಿ ಸರಿಯಾಗಿ ಇಲ್ಲದೆ ಇರುವುದರಿಂದ ಎರಡು ಮೂರು ಕಂತುಗಳು ಬಾಕಿ ಉಳಿಸಿಕೊಂಡಿದ್ದರು. ಇದರಿಂದ ಮೈಕ್ರೊ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಲು ಆರಂಭಿಸಿದರು.
ನಿಮ್ಮನ್ನು ಯಾರೂ ಮೂಸಲ್ಲ, ನಿಮ್ಮ ಹೆಣ್ಮಕ್ಕಳನ್ನು ದಂಧೆ ಕಳುಹಿಸಿಯಾದ್ರೂ ಹಣ ಕೊಡಿ ಎಂದು ಕಿರುಕುಳ ನೀಡುತ್ತಿದ್ದರು. ಇದರಿಂದ ಹೆದರಿದ ವನಜಾಕ್ಷಿ ಮಗಳು ಭಾರತಿ ಕಳೆದ ಮೂರು ದಿನ ಸ್ಮಶಾನದಲ್ಲಿ ಕಾಲಕಳೆದಿದ್ದಾರೆ.