

ಜೊಯಿಡಾ: ವ್ಯಕ್ತಿಯೊಬ್ಬರ ಮೇಲೆ ಸೋಮವಾರ ಬೆಳಗ್ಗೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಡೆರಿಯಾ ಗ್ರಾಮದಲ್ಲಿ ನಡೆದಿದೆ.
ಡೆರಿಯಾ ಗ್ರಾಮದ 55 ವರ್ಷದ ಶಾಂತಾ ಹನುಮಂತ ಡೇರೆಕರ್ ಎಂಬುವವರು ಮನೆಯಿಂದ ಗದ್ದೆಗೆ ಹೋಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಕರಡಿಯು ಮುಖಕ್ಕೆ ಕಚ್ಚಿದೆ.
ಗಾಯಗೊಂಡ ಶಾಂತಾ ಅವರನ್ನು ಜೊಯಿಡಾ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.