ಶೌಚಗೃಹದಲ್ಲಿ ಮಹಿಳಾ ಪೇದೆ ಮೊಬೈಲ್ ನಂಬರ್: ಇದರ ಹಿಂದಿದೆ ವಾಟ್ಸ್​ಆ್ಯಪ್​ ಗ್ರೂಪ್​ ದುರ್ಬಳಕೆ!

Woman Police
Published on

ಬೆಂಗಳೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಯೊಬ್ಬ ಮಹಿಳಾ ಪೊಲೀಸ್ ಪೇದೆ ಫೋನ್ ನಂಬರ್ ಅನ್ನು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಪುರುಷರ ಶೌಚಗೃಹದಲ್ಲಿ ಬರೆದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಡೂರು ಮೂಲದ ಸತೀಶ್ ಎಂಬಾತನ ವಿರುದ್ಧ ಯಲಹಂಕ ಉಪನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತ ಮಹಿಳೆ ನಗರದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಲೈಂಗಿಕ ವಿಚಾರವಾಗಿ ಮಾತನಾಡತೊಡಗಿದ್ದರು. ವಿಚಾರಿಸಿದಾಗ ಕಡೂರಿನ ಬಸ್ ನಿಲ್ದಾಣದಲ್ಲಿನ ಪುರುಷ ಶೌಚಗೃಹದಲ್ಲಿ ಫೋನ್ ನಂಬರ್ ಬರೆದಿರುವ ವಿಚಾರ ಗೊತ್ತಾಗಿತ್ತು.

ಮಹಿಳೆ 2006ರಲ್ಲಿ ಡಿ.ಇಡ್ ವ್ಯಾಸಂಗ ಮಾಡುವ ವೇಳೆ ಸತೀಶ್ ಸಹಪಾಠಿಯಾಗಿದ್ದ. 2017ರಲ್ಲಿ ಕಾಲೇಜಿನ ಸ್ನೇಹಿತರ ವ್ಯಾಟ್ಸ್ ಆಪ್ ಗ್ರೂಪ್ ರಚಿಸಲಾಗಿತ್ತು. ಸತೀಶ್ ಅನವಶ್ಯಕವಾಗಿ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸುವುದು ಮಾಡುತ್ತಿದ್ದ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿಯಾಗಿತ್ತು. ಇದೇ ವಿಚಾರ ವಾಗಿ ದ್ವೇಷ ಇಟ್ಟುಕೊಂಡಿರುವ ಶೌಚಗೃಹದಲ್ಲಿ ಫೋನ್ ನಂಬರ್ ಬರೆದಿದ್ದಾನೆ. ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net