

ಮಂಡ್ಯ: ತಾಲೂಕಿನ ಮಂಡ್ಯ-ಹನಕೆರೆ ಮಾರ್ಗದಲ್ಲಿ ಭಾನುವಾರ ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಮೃತಪಟ್ಟಿದ್ದಾರೆ.
ಸುಮಾರು 45 ರಿಂದ 50 ವರ್ಷದವರಾಗಿದ್ದು, ಐದು ಅಡಿ ಎತ್ತರವಿದ್ದಾರೆ. ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಎಡ ಮತ್ತು ಬಲಗೈ ಮೇಲೆ ರಂಗೋಲಿ ಚಿತ್ರವಿರುವ ಹಸಿರು ಹಚ್ಚೆ ಇದೆ. ಈಕೆಯ ಮೈಮೇಲೆ ಬಿಸ್ಕೇಟ್ ಬಣ್ಣದ ಸೀರೆ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಹೂವುಗಳ್ಳ ಚಿತ್ರ ಧರಿಸಿದ್ದಾರೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.