

ವಿಜಯಪುರ: ಮಹಿಳೆಯರು ಒಂದೇ ೇತ್ರಕ್ಕೆ ಸೀಮಿತವಾಗದೆ ತಂತ್ರಜ್ಞಾನ, ಆರ್ಥಿಕ, ರಾಜಕೀಯ ಸೇರಿ ವಿವಿಧ ೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದು ಡಾ. ಶ್ವೇತಾ ಸನದಿ ಹೇಳಿದರು.
ನಗರದ ಚೇತನಾ ಶಿಕ್ಷಣ ಸಂಸ್ಥೆಯ ಚೇತನಾ ಬಿಸಿಎ ಮತ್ತು ಬಿಬಿಎ ಡಿಗ್ರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ತನ್ನ ಅಮೋವಾದ ಚಾರಿತ್ರದಿಂದ ಜಗತ್ತಿನ ಮೊದಲ ಗುರು ಆಗಿದ್ದಾಳೆ ಎಂದರು.
ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿ, ತೊಟ್ಟಿಲು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. ಮಹಿಳೆೆಯಲ್ಲಿ ಅಂತಹ ಸದೃಢವಾದ ಶಕ್ತಿ ಇದೆ. ಮಹಿಳೆಯರು ಒಗ್ಗಟ್ಟಿನಿಂದ ತಮ್ಮ ಕಾರ್ಯ ೇತ್ರದಲ್ಲಿ ಕಾರ್ಯ ನಿರ್ವಹಿಸಿದರೆ ಜಗತ್ತಿನ ಉತ್ತಮ ಸಾಧಕಿಯಾಗುತ್ತಾರೆ ಎಂದು ಹೇಳಿದರು.
ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಬ್ಯಾಕೋಡ, ಸಂಸ್ಥೆ ಉಪಾಧ್ಯಕ್ಷ ರೋಹಿತ ಜುಗತಿ, ಸ್ನೇಹಾ ಜುಗತಿ, ನಿರ್ದೇಶಕ ಡಾ. ನಾಗರಾಜ ಹೇರಲಗಿ, ಶಾರದಾ ಹೇರಲಗಿ, ಸಹಾಯಕ ಆಡಳಿತಾಧಿಕಾರಿ ಪ್ರಮೋದ ಕುಲಕರ್ಣಿ ಮತ್ತಿತರರಿದ್ದರು.